ದರ್ಶನ್​ ಶಿಫ್ಟ್​ ಆಗುವ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ 140 ವರ್ಷಗಳ ಇತಿಹಾಸ

ಕೊಲೆ ಆರೋಪಿ ನಟ ದರ್ಶನ್​​ನನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್​ ಮಾಡಲು ನಿರ್ಧರಿಸಲಾಗಿದೆ. ಬಳ್ಳಾರಿ ಕಾರಾಗೃಹಕ್ಕೆ 140 ವರ್ಷಗಳ ಇತಿಹಾಸವಿದೆ. ಬಳ್ಳಾರಿಯಲ್ಲಿದ್ದವು ಮೂರು ಕಾರಾಗೃಹಗಳು. ಈ ಬಳ್ಳಾರಿ ಕಾರಾಗೃಹಗಳನ್ನು ನಿರ್ಮಿಸಿದವರು ಯಾರು? ಯಾವಾಗ ನಿರ್ಮಿಸಿದರು ಎಂಬ ಮಾಹಿತಿ ಇಲ್ಲಿದೆ.

ದರ್ಶನ್​ ಶಿಫ್ಟ್​ ಆಗುವ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ 140 ವರ್ಷಗಳ ಇತಿಹಾಸ
ಬಳ್ಳಾರಿ ಕೇಂದ್ರ ಕಾರಾಗೃಹ
Follow us
| Updated By: ರಾಜೇಶ್ ದುಗ್ಗುಮನೆ

Updated on:Sep 03, 2024 | 3:09 PM

ಬಳ್ಳಾರಿ, ಆಗಸ್ಟ್​ 28: ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ (Bengaluru Central Jail) ರಾಜಾತಿಥ್ಯ ಪಡೆಯುತ್ತಿದ್ದ ಕೊಲೆ ಆರೋಪಿ ನಟ ದರ್ಶನ್​​ನನ್ನು (Darshan) ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ (Ballari Central Jail) ಶಿಫ್ಟ್​ ಮಾಡಲು ನಿರ್ಧರಿಸಲಾಗಿದೆ. ದರ್ಶನ್​ ಇಂದು (ಆಗಸ್ಟ್​​.28) ರಾತ್ರಿ ಕಾರಾಗೃಹಕ್ಕೆ ಶಿಫ್ಟ್​ ಆಗುವ ಸಾಧ್ಯತೆ ಇದೆ. ಬಳ್ಳಾರಿ ಕಾರಾಗೃಹಕ್ಕೆ 140 ವರ್ಷಗಳ ಇತಿಹಾಸವಿದೆ. ಈ ಬಳ್ಳಾರಿ ಕಾರಾಗೃಹವನ್ನು ನಿರ್ಮಿಸಿದವರು ಯಾರು? ಯಾವಾಗ ನಿರ್ಮಿಸಿದರು ಎಂಬ ಮಾಹಿತಿ ಇಲ್ಲಿದೆ.

ಬಳ್ಳಾರಿ ಕೇಂದ್ರ ಕಾರಾಗೃಹ ಇತಿಹಾಸವೇ ರೋಚಕ

ಬಳ್ಳಾರಿ ಕೇಂದ್ರ ಕಾರಾಗೃಹ ಸ್ವಾತಂತ್ರ ಹೋರಾಟಗಾರಿಗೂ ಭಯ ಹುಟ್ಟಿಸಿತ್ತು. ಸ್ವಾತಂತ್ರ್ಯ ಹೋರಾಟಗಾರರನ್ನು ಇರಿಸಲು 1874ರಲ್ಲಿ ಬ್ರಿಟಿಷ್ ಸರ್ಕಾರ ಬಳ್ಳಾರಿ ಕೇಂದ್ರ ಕಾರಾಗೃಹ ನಿರ್ಮಾಣ ಮಾಡಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ನಾಯಕರನ್ನು ಬಳ್ಳಾರಿ ಜೈಲಿನಲ್ಲಿ ಇರಿಸಲಾಗುತ್ತಿತ್ತು. ಮದ್ರಾಸ್ ಪ್ರಾಂತ್ಯದ ನಾಲ್ಕು ಜಿಲ್ಲೆ ಹೋರಾಟಗಾರನನ್ನು ಬಳ್ಳಾರಿ ಜೈಲಿನಲ್ಲಿ ಬ್ರಿಟೀಷರು ಬಂಧಿಸಿ ಇಡುತ್ತಿದ್ದರು.

ಇದನ್ನೂ ಓದಿ: ತಮ್ಮದೇ ಸಿನಿಮಾ ಶೂಟ್ ಮಾಡಿದ ಜೈಲಿಗೆ ದರ್ಶನ್; ಮುಗಿಯಬೇಕಿದೆ ಪ್ರಮುಖ ಪ್ರಕ್ರಿಯೆ

ಬಳ್ಳಾರಿಯಲ್ಲಿ ಒಟ್ಟು 3 ಕಾರಾಗೃಹ

ಸ್ವಾತಂತ್ರ್ಯ ಹೋರಾಟದ ವೇಳೆ ಬಳ್ಳಾರಿಯಲ್ಲಿ ಮೂರು ಕಾರಾಗೃಹಗಳನ್ನು ಬ್ರಿಟೀಶ್​ರು ನಿರ್ಮಾಣ ಮಾಡಿದ್ದರು. ಎರಡನೇ ಮಹಾಯುದ್ಧಕ್ಕೂ ಮುನ್ನ ಬಳ್ಳಾರಿ ಕೇಂದ್ರ ಕಾರಾಗೃಹವನ್ನು ನಿರ್ಮಾಣ ಮಾಡಲಾಯಿತಿ. ನಂತರ ಅಲ್ಲಿಪುರ ಜೈಲನ್ನು ನಿರ್ಮಾಣ ಮಾಡಲಾಯಿತು. ಸ್ವಾತಂತ್ರ್ಯ ಸಂಗ್ರಾಮದ ವೇಳೆ ಕ್ಷಯ ರೋಗ ಹೆಚ್ಚಾದ ಹಿನ್ನೆಲೆಯಲ್ಲಿ ಬಳ್ಳಾರಿಯ ಟಿಬಿ ಸ್ಹಾನಿಟೋರಿಯಂ ಪ್ರದೇಶದಲ್ಲಿ ಬ್ರಿಟೀಷ ಅಧಿಕಾರಿ ವೆಲ್ಲೆಸ್ಲಿ ಮತ್ತೊಂದು ಜೈಲು ನಿರ್ಮಿಸಿನು. ಕ್ಷಯರೋಗಕ್ಕೆ ತುತ್ತಾದ ಆರೋಪಿಗಳನ್ನು ಇಲ್ಲಿ ಇರಿಸಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿತ್ತು.

ಮದ್ರಾಸ್ ಪ್ರಾಂತ್ಯದ ಕಡಪ, ಕರ್ನೂಲ್, ಅನಂತಪುರ ಹಾಗೆ ಬಳ್ಳಾರಿ ಜಿಲ್ಲೆ ಹೋರಾಟಗಾರನ್ನು ಬಂಧಿಸಿ, ಇರಿಸಲು ಈ ಮೂರು ಜೈಲುಗಳನ್ನು ನಿರ್ಮಾಣ ಮಾಡಲಾಗಿತ್ತು. ಸದ್ಯ ಟಿಬಿ ಸ್ಹಾನಿಟೋರಿಯಂ ಮತ್ತು ಅಲ್ಲಿಪುರ ಜೈಲುಗಳು ಬಂದ್​ ಆಗಿವೆ. ಬಳ್ಳಾರಿ ಕೇಂದ್ರ ಕಾರಾಗೃಹ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಸದ್ಯ 385 ಖೈದಿಗಳು ಇದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:19 am, Wed, 28 August 24