ಬಳ್ಳಾರಿ ಜೈಲಲ್ಲಿ ವಾರ್ಡನ್​ಗಳೇ ಕ್ಯಾಂಟೀನ್ ನಡೆಸುತ್ತಾರೆ, ಗಾಂಜಾ ಯಥೇಚ್ಛವಾಗಿ ಸಿಗುತ್ತದೆ: ಮಾಜಿ ಕೈದಿ

ಬಳ್ಳಾರಿ ಜೈಲಲ್ಲಿ ವಾರ್ಡನ್​ಗಳೇ ಕ್ಯಾಂಟೀನ್ ನಡೆಸುತ್ತಾರೆ, ಗಾಂಜಾ ಯಥೇಚ್ಛವಾಗಿ ಸಿಗುತ್ತದೆ: ಮಾಜಿ ಕೈದಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 28, 2024 | 1:43 PM

ಬಳ್ಳಾರಿ ಜೈಲಿನಲ್ಲಿ ವಾರ್ಡನ್ ಗಳೇ ಕ್ಯಾಂಟೀನ್ ನಡೆಸುತ್ತಾರಂತೆ! ದರ್ಶನ್ ಅವರನ್ನು ಇಲ್ಲಿ ಸಾಗಹಾಕುತ್ತಿರುವುದು ಸರ್ಕಾರದ ಒಳ್ಳೆಯ ನಿರ್ಧಾರವೇನೂ ಅಲ್ಲ, ಗಾಂಜಾ ಮತ್ತು ಇತರ ಮಾದಕ ವಸ್ತುಗಳು ಯಥೇಚ್ಛವಾಗಿ ಸಿಗುವ ಇಲ್ಲಿನ ಜೈಲಿನಲ್ಲಿ ದರ್ಶನ್ ಮತ್ತಷ್ಟು ಕೆಟ್ಟು ಹೋಗಬಹುದೆಂಬ ಕಳಕಳಿಯನ್ನು ಜಯಸಿಂಹ ವ್ಯಕ್ತಡಿಸುತ್ತಾರೆ.

ಬಳ್ಳಾರಿ: ಸರ್ಕಾರವೇನೋ ಕೊಲೆ ಆರೋಪಿ ದರ್ಶನ್​ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುತ್ತಿದೆ. ಅದರೆ ಕೊಲೆ ಅಪರಾಧದಲ್ಲಿ 4 ವರ್ಷಗಳ ಕಾಲ ಬಳ್ಳಾರಿ ಜೈಲಲ್ಲಿದ್ದು 2021ರಲ್ಲಿ ಬಿಡುಗಡೆಯಾಗಿರುವ ಜಯಸಿಂಹ ಹೇಳುವ ಪ್ರಕಾರ ಇಲ್ಲಿನ ಜೈಲು ಬೆಂಗಳೂರು ಜೈಲಿಗಿಂತ ಕೆಟ್ಟ ಸ್ಥಿತಿಯಲ್ಲಿದೆಯಂತೆ. ಹಣ ನೀಡಿದರೆ ವಾರ್ಡನ್ ಗಳು ಯಾವುದೇ ವಸ್ತು ಬೇಕಾದರೂ ಒದಗಿಸುತ್ತಾರೆ ಎಂದು ಅವರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ದರ್ಶನ್​ ಬರಮಾಡಿಕೊಳ್ಳಲು ಬಳ್ಳಾರಿ ಸೆಂಟ್ರಲ್​ ಜೈಲಿನಲ್ಲಿ ಹೇಗೆಲ್ಲಾ ಸಿದ್ಧತೆಗಳು ನಡೆದಿವೆ ನೋಡಿ