ಸಚಿವ ಸುರೇಶ್ ಮಗನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಜೊತೆಯಾಗಿ ಊಟ ಮಾಡಿದ ರಾಜ್ಯಪಾಲರು ಮತ್ತು ಡಿಸಿಎಂ!
ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಮತ್ತು ಉಪ ಮುಖ್ಯಮಂತ್ರಿಯಲ್ಲದೆ ಸಚಿವ ಡಾ ಎಂಸಿ ಸುಧಾಕರ್, ಶಾಸಕರಾದ ಶರತ್ ಬಚ್ಚೇಗೌಡ, ಎಸ್ ಆರ್ ವಿಶ್ವನಾಥ್ ಮೊದಲಾದವರು ಭಾಗಿಯಾಗಿದ್ದರು.
ಬೆಂಗಳೂರು: ರಾಜ್ಯಪಾಲರ ಕಚೇರಿ ಮತ್ತು ಕರ್ನಾಟಕ ಸರ್ಕಾರದ ನಡುವೆ ಒಂದು ತಿಂಗಳಕ್ಕಿಂತ ಹೆಚ್ಚಿನ ಅವಧಿಯಿಂದ ನಡುವೆ ನಡೆಯುತ್ತಿರುವ ತಿಕ್ಕಾಟ ಮತ್ತು ಘರ್ಷಣೆ ಯಾರಿಗೆ ಗೊತ್ತಿಲ್ಲ? ಇವತ್ತು ನಗರದ ಖಾಸಗಿ ಹೋಟೆಲೊಂದರಲ್ಲಿ ನಡೆದ ಸಚಿವ ಭೈರತಿ ಸುರೇಶ್ ಮಗನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ರಾಜಕೀಯ ಕಹಿ ಮರೆತು, ಜೊತೆಯಾಗಿ ಕೂತು ಹರಟುತ್ತ್ತಾ ಊಟ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ತನ್ನ ಸಹಿಯ ಫೋರ್ಜರಿಯಾಗಿದ್ದರೂ ಕುಮಾರಸ್ವಾಮಿ ಯಾಕೆ ದೂರು ದಾಖಲಿಸಿಲ್ಲ? ಡಿಕೆ ಶಿವಕುಮಾರ್
Published On - 2:40 pm, Wed, 28 August 24