ನನ್ನನ್ನು ಆರೆಸ್ಸೆಸ್ ಏಜೆಂಟ್ ಎನ್ನುವ ಮುಬಾರಕ್ ಒಬ್ಬ ತಾಲಿಬಾನಿ: ಕೊಟ್ಟೂರು ಮಂಜುನಾಥ್, ಶಾಸಕ

ನನ್ನನ್ನು ಆರೆಸ್ಸೆಸ್ ಏಜೆಂಟ್ ಎನ್ನುವ ಮುಬಾರಕ್ ಒಬ್ಬ ತಾಲಿಬಾನಿ: ಕೊಟ್ಟೂರು ಮಂಜುನಾಥ್, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 28, 2024 | 3:13 PM

ಮುಬಾರಕ್ ಹೇಳಿರುವಂತೆ ತಾನು ಆರೆಸ್ಸೆಸ್ ಏಜೆಂಟ್ ಹೌದು, ತಾನು ಈ ಭಾಗದ ಶಾಸಕ ಮತ್ತು ಯಾರನ್ನು ಎಲ್ಲಿಗೆ ಕರೆಸಿ ಮಾತಾಡಬೇಕು ಅನ್ನೋದು ತನ್ನ ವಿವೇಚನೆಗೆ ಬಿಟ್ಟ ವಿಷಯ, ಗೆಸ್ಟ್ ಹೌಸ್ ಗಳ ಬಗ್ಗೆ ಪ್ರಶ್ನಿಸುವ ಅಧಿಕಾರ ಮುಬಾರಕ್ ಗೆ ಇಲ್ಲ ಎಂದು ಮಂಜುನಾಥ್ ಹೇಳಿದರು.

ಕೋಲಾರ: ಸ್ಥಳೀಯ ಶಾಸಕ ಕೊತ್ತೂರು ಮಂಜುನಾಥ್ ಮತ್ತು ನಗರಸಭೆಯ ಮಾಜಿ ಅಧ್ಯಕ್ಷ ಮುಬಾರಕ್ ನಡುವೆ ಹಲವಾರು ದಿನಗಳಿಂದ ವೈಷಮ್ಯ ಹೆಡಯೆತ್ತಿದೆ. ಮುಬಾರಕ್ ಮಾತಾಡುವ ಸಂದರ್ಭದಲ್ಲಿ ತನ್ನನ್ನು ಆರೆಸ್ಸೆಸ್ ಏಜೆಂಟ್ ಎಂದು ಕರೆದಿರುವುದಕ್ಕೆ ಕೆರಳಿರುವ ಮಂಜುನಾಥ್ ನನ್ನನ್ನು ಪ್ರಶ್ನಿಸಲು ಅವನ್ಯಾರು, ಅವನೊಬ್ಬ ತಾಲಿಬಾನಿ ಮತ್ತು ಅವನಿಂದಾಗಿ 50-60 ಕುಟುಂಬಗಳು ಸರ್ವನಾಶವಾಗಿವೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೆಎಎಸ್​​ ಪ್ರಿಲಿಮ್ಸ್​ ಪರೀಕ್ಷೆ: ಕೋಲಾರದಲ್ಲಿ ಪರೀಕ್ಷಾರ್ಥಿಗಳಿಗೆ ಊಟ, ವಸತಿ ವ್ಯವಸ್ಥೆ ಮಾಡಿಸಿದ ಡಿಸಿ