ಡಿ ಬಾಸ್ ಭೇಟಿಯಾಗಲು ಬಳ್ಳಾರಿ ಜೈಲಿಗೆ ಬಂದ ವಿಜಯಲಕ್ಷ್ಮಿಯವರನ್ನು ನೋಡಲು ನೆರೆದ ಅಭಿಮಾನಿಗಳು

|

Updated on: Aug 31, 2024 | 7:49 PM

ಪತಿಯನ್ನು ನೋಡಲು ಬಂದಿದ್ದ ವಿಜಯಲಕ್ಷ್ಮಿ ಭಾರವಾದ ಹೃದಯದಿಂದ ಮತ್ತು ಕಳೆಗುಂದಿದ ಮುಖಭಾವದೊಂದಿಗೆ ವಾಪಸ್ಸು ಹೋದರು ಎಂದು ನಮ್ಮ ವರದಿಗಾರ ಮಾಹಿತಿ ನೀಡಿದ್ದಾರೆ. ಮತ್ತೇನು ಮಾಡಿಯಾರು? ಕೊಲೆ ಆರೋಪ ಸಾಬೀತಾದರೆ ದರ್ಶನ್ ಗೆ ಯಾವ ಶಿಕ್ಷೆ ಕಾದಿದೆಯೋ? ಅದೇ ಆನಿಶ್ಚಿತತೆಯೊಂದಿಗೆ ವಿಜಯಲಕ್ಷ್ಮಿ ವಾಪಸ್ಸು ಹೋಗಿರುತ್ತಾರೆ.

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ರನ್ನು ನೋಡಲು ಇವತ್ತು ಅವರ ಪತ್ನಿ ವಿಜಯಲಕ್ಷ್ಮಿ ಬಂದಿದ್ದರು. ಅವರ ಅಗಮನದ ಸುದ್ದಿ ಬಳ್ಳಾರಿ ನಗರದಲ್ಲಿ ಕಾಳ್ಗಿಚ್ಚಿನಂತೆ ಹರಡಿತು. ತಮ್ಮ ಡಿ ಬಾಸ್ ನನ್ನು ನೋಡಲು ಬಂದ ವಿಜಯಲಕ್ಷ್ಮಿ ಅವರನ್ನು ನೋಡಲು ಅಭಿಮಾನಿಗಳು ಬಾರದಿರುತ್ತಾರೆಯೇ? ತಂಡೋಪತಂಡವಾಗಿ ಬಂದು ಜೈಲಿನ ಮುಂದೆ ನೆರೆದರು. ಜನ ಸಾಲಾಗಿ ನಿಂತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಳ್ಳಾರಿ ಜೈಲಲ್ಲಿ ದರ್ಶನ್​ಗೆ ಮೂರನೇ ದಿನ, ಪರಿಶೀಲನೆಗೆ ಆಗಮಿಸಿದ ಉತ್ತರ ವಲಯ ಡಿಐಜಿ ಟಿಪಿ ಶೇಷ