ಫ್ಯಾನ್​ ಪೇಜ್ ನಿರ್ವಹಣೆಗೆ ದರ್ಶನ್ 25 ಲಕ್ಷ ಖರ್ಚು ಮಾಡ್ತಾರೆ; ಲಾಯರ್ ಜಗದೀಶ್

Updated on: Jul 31, 2025 | 9:36 AM

ಜಗದೀಶ್ ಅವರು ಆಗಾಗ ದರ್ಶನ್ ಅಭಿಮಾನಿಗಳ ವಿರುದ್ಧ ಕೂಗಾಟ ನಡೆಸುತ್ತಾ ಇರುತ್ತಾರೆ. ಈಗ ಅವರು ಒಂದು ಹೊಸ ಆರೋಪ ಮಾಡಿದ್ದಾರೆ. ದರ್ಶನ್ ಫ್ಯಾನ್ಸ್​ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ದರ್ಶನ್ ಫ್ಯಾನ್​​ ಪೇಜ್​ಗಳ ನಿರ್ವಹಣಗೆ 25 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ಅವರು ಹೇಳಿದ್ದಾರೆ.

ದರ್ಶನ್ ಫ್ಯಾನ್​ ಪೇಜ್​​ಗಳ ಮೇಲೆ ಸಾಕಷ್ಟು ಆರೋಪಗಳು ಬಂದಿವೆ. ಅವರು ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ವಿಚಾರ ಸಾಕಷ್ಟು ಸುದ್ದಿ ಆಗಿದೆ. ಹೀಗಿರುವಾಗಲೇ ಲಾಯರ್ ಜಗದೀಶ್ ಅವರು ಒಂದಷ್ಟು ಆರೋಪ ಮಾಡಿದ್ದಾರೆ. ದರ್ಶನ್ (Darshan) ಫ್ಯಾನ್ ಪೇಜ್​ಗಳ ನಿರ್ವಹಣೆಗೆ ಪ್ರತಿ ತಿಂಗಳು 25 ಲಕ್ಷ ರೂಪಾಯಿ ಪೂರೈಕೆ ಆಗುತ್ತಿದೆ ಎಂದು ಲಾಯರ್ ಜಗದೀಶ್ ಅವರು ಆರೋಪಿಸಿದ್ದಾರೆ. ರಜನಿ ಎಕ್ಸ್​ಪ್ರೆಸ್​ ಎಂಬುವವರು ಈ ಗ್ರೂಪ್​ನ ನೋಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಅವರನ್ನು ವಿಚಾರಣೆ ನಡೆಸಿ ಎಲ್ಲಾ ಮಾಹಿತಿ ಹೊರ ತೆಗೆಯಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jul 30, 2025 11:44 AM