ದರ್ಶನ್ ಪ್ರಕರಣ: ಸ್ಥಳ ಮಹಜರಿನಲ್ಲಿ ಕಿಡ್ನ್ಯಾಪ್​ ವಿಚಾರ ಬಿಚ್ಚಿಟ್ಟ ರಘು

|

Updated on: Jun 14, 2024 | 8:38 AM

ಜೂನ್ 13ರ ತಡರಾತ್ರಿ ಚಿತ್ರದುರ್ಗದಲ್ಲಿ ಆರೋಪಿ ರಘು ಅವರನ್ನು ಕರೆತಂದು ಮಹಜರು ಮಾಡಲಾಗಿದೆ. ಚಳ್ಳಕೆರೆ ಗೇಟ್ ಬಳಿ ರೇಣುಕಾ ಸ್ವಾಮಿ ಬೈಕ್ ನಿಲ್ಲಿಸಿದ್ದರು. ಆ ಬಳಿಕ ಅವರ ಕಿಡ್ನ್ಯಾಪ್ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸ್ಥಳಮಹಜರು ಮಾಡಲಾಗಿದೆ.

ನಟ ದರ್ಶನ್ ಹಾಗೂ ಗ್ಯಾಂಗ್​ನಿಂದ ರೇಣುಕಾ ಸ್ವಾಮಿ (Renukaswami) ಕೊಲೆ ಮಾಡಿದ ಪ್ರಕರಣ ಸಾಕಷ್ಟು ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರಿಗೆ ಬಲವಾದ ಸಾಕ್ಷಿಗಳು ಸಿಗುತ್ತಿವೆ. ಈಗ ಜೂನ್ 13ರ ತಡರಾತ್ರಿ ಚಿತ್ರದುರ್ಗದಲ್ಲಿ ಆರೋಪಿ ರಘು ಅವರನ್ನು ಕರೆತಂದು ಮಹಜರು ಮಾಡಲಾಗಿದೆ. ಚಳ್ಳಕೆರೆ ಗೇಟ್ ಬಳಿ ರೇಣುಕಾ ಸ್ವಾಮಿ ಬೈಕ್ ನಿಲ್ಲಿಸಿದ್ದರು. ಆ ಬಳಿಕ ಅವರ ಕಿಡ್ನ್ಯಾಪ್ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸ್ಥಳಮಹಜರು ಮಾಡಲಾಗಿದೆ. ಎಲ್ಲಿ ಅವರನ್ನು ಕಿಡ್ನ್ಯಾಪ್ ಮಾಡಲಾಯಿತು, ಹೇಗೆ ಕರೆದುಕೊಂಡು ಹೋಗಲಾಯಿತು ಎನ್ನುವುದನ್ನು ರಘು ಅವರು ವಿವರಿಸಿದ್ದಾರೆ. ಸ್ಥಳಮಹಜರಿನ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jun 14, 2024 08:24 AM