‘ಲೋಫರ್ ಫ್ರೆಂಡ್ಸ್​ನಿಂದ ದರ್ಶನ್ ಹಾಳಾದ, ಆತನಿಗೆ ಶಿಕ್ಷಣದ ಕೊರತೆ ಇದೆ’; ನಟನ ಗುರುವಿನ ಮಾತು

|

Updated on: Jun 15, 2024 | 2:39 PM

ಒಂದು ಹೆಣ್ಣಿಗಾಗಿ ಕೊಲೆ ಮಾಡುವ ಹಂತಕ್ಕೆ ಹೋಗುತ್ತಾರೆ ಎಂದು ಯಾರೆಂದರೆ ಯಾರೂ ಊಹಿಸಿರಲಿಲ್ಲ. ಈ ಬಗ್ಗೆ ದರ್ಶನ್ ಮೊದಲ ಗುರು ಎನಿಸಿಕೊಂಡಿರೋ ಅಡ್ಡಂಡ ಕಾರ್ಯಪ್ಪ ಅವರು ಮಾತನಾಡಿದ್ದಾರೆ. ದರ್ಶನ್ ಈ ಸ್ಥಿತಿಗೆ ಪವಿತ್ರಾ ಗೌಡ ಕಾರಣ ಎಂದು ಅವರು ಹೇಳಿದ್ದಾರೆ. ಈ ವಿಡಿಯೋ ಟಿವಿ 9 ಕನ್ನಡಕ್ಕೆ ಲಭ್ಯವಾಗಿದೆ.

ನಟ ದರ್ಶನ್ ಅವರು ನಡೆದುಕೊಂಡ ರೀತಿ ಅನೇಕರಿಗೆ ಕೋಪ ತರಿಸಿದೆ. ಒಂದು ಹೆಣ್ಣಿಗಾಗಿ ಕೊಲೆ ಮಾಡುವ ಹಂತಕ್ಕೆ ಹೋಗುತ್ತಾರೆ ಎಂದು ಯಾರೆಂದರೆ ಯಾರೂ ಊಹಿಸಿರಲಿಲ್ಲ. ಈ ಬಗ್ಗೆ ದರ್ಶನ್ (Darshan) ಮೊದಲ ಗುರು ಎನಿಸಿಕೊಂಡಿರೋ ಅಡ್ಡಂಡ ಕಾರ್ಯಪ್ಪ ಅವರು ಮಾತನಾಡಿದ್ದಾರೆ. ದರ್ಶನ್ ಈ ಸ್ಥಿತಿಗೆ ಪವಿತ್ರಾ ಗೌಡ ಕಾರಣ ಎಂದು ಅವರು ಹೇಳಿದ್ದಾರೆ. ‘ದರ್ಶನ್​ಗೆ ಶಿಕ್ಷಣದ ಕೊರತೆ ಇದೆ. ಅವನ ಫ್ರೆಂಡ್ಸ್ ಸರಿ ಇಲ್ಲ. ಅವರ ಫ್ರೆಂಡ್ಸ್ ಲೋಫರ್​ಗಳು. ಸುದೀಪ್​ಗೆ ಈ ರೀತಿಯ ಫ್ರೆಂಡ್ ಸರ್ಕಲ್ ಮಾಡಿಕೊಳ್ಳೋಕಾಗಲ್ಲ. ಏಕೆಂದರೆ ಅವನ ಓದಿದವನು. ಗೆಳೆಯರನ್ನು ನೋಡಿ ಅಳೆಯಬಹುದು. ಹೆಂಡ ಕೂಡ ಅವನು ಹಾಳಾಗೋಕೆ ಕಾರಣ. ರಾಜ್​ಕುಮಾರ್ ಅವರಿಂದ ದರ್ಶನ್ ಕಲಿಯಲೇ ಇಲ್ಲ. ತನ್ನ ಒಳ್ಳೆಯ ಗುಣಗಳನ್ನು ದರ್ಶನ್ ಉಪಯೋಗಿಸಿಕೊಳ್ಳಲೇ ಇಲ್ಲ. ಹೆಂಡ, ಹೆಣ್ಣಿನಿಂದ ಹಾಳಾದ. ತಪ್ಪು ಮಾಡಿದಾನೆ. ಪವಿತ್ರಾ ಶನಿ ರೂಪದಲ್ಲಿ ಬಂದಿದ್ದಾಳೆ. ರೇಣುಕಾ ಸ್ವಾಮಿಯ ಪತ್ನಿ ಒಂಟಿಯಾಗಿದ್ದಾಳೆ. ಅಭಿಮಾನಿಗಳು ಅವರ ಸಹಾಯಕ್ಕೆ ನಿಲ್ಲಿ’ ಎಂದು ಅವರು ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:22 pm, Sat, 15 June 24

Follow us on