AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಣುಕಾ ಸ್ವಾಮಿ ಪ್ರಕರಣದ ಆರೋಪಿ ಜಗದೀಶ್ ತಾಯಿ ಮಾತು

ರೇಣುಕಾ ಸ್ವಾಮಿ ಪ್ರಕರಣದ ಆರೋಪಿ ಜಗದೀಶ್ ತಾಯಿ ಮಾತು

ಮಂಜುನಾಥ ಸಿ.
|

Updated on: Jun 14, 2024 | 6:05 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಸಹ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ 7ನೇ ಆರೋಪಿ ಆಗಿರುವ ಚಿತ್ರದುರ್ಗದ ಜಗದೀಶ್ ಇಂದು ಪೊಲೀಸರಿಗೆ ಶರಣಾಗಿದ್ದಾನೆ. ಆತನ ತಾಯಿ ಹಾಗೂ ಸಂಬಂಧಿಗಳು ಜಗದೀಶ್ ಬಗ್ಗೆ ಮಾತನಾಡಿದ್ದಾರೆ.

ರೇಣುಕಾ ಸ್ವಾಮಿ (Renuka Swamy) ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ ಏರುತ್ತಲೇ ಸಾಗುತ್ತಿದೆ. ದರ್ಶನ್ (Darshan Thoogudeepa), ಪವಿತ್ರಾ ಗೌಡ, ಪ್ರದೋಶ್, ದೀಪಕ್, ರಘು ಪ್ರಮುಖ ಆರೋಪಿಗಳಾಗಿದ್ದರೆ ಜಗದೀಶ್, ಅನು, ರವಿ, ಮೈಸೂರಿನ ನಾಗು ಇನ್ನೂ ಹಲವರು ಸಹ ಕೊಲೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ರೇಣುಕಾ ಸ್ವಾಮಿಯನ್ನು ಅಪಹರಣ ಮಾಡಿ ಕರೆದುಕೊಂಡು ಹೋದವರಲ್ಲಿ ಒಬ್ಬನಾಗಿರುವ ಆರೋಪಿ ನಂಬರ್ 7, ಜಗದೀಶ್ ಇಂದು (ಜೂನ್ 14) ಪೊಲೀಸರಿಗೆ ಶರಣಾಗಿದ್ದಾನೆ. ಆಟೋ ಓಡಿಸಿಕೊಂಡಿದ್ದ ಈ ಯುವಕ ದರ್ಶನ್​ನ ಅಪ್ಪಟ ಅಭಿಮಾನಿಯಾಗಿದ್ದ. ಈ ಅಭಿಮಾನವನ್ನೇ ದುರುಪಯೋಗ ಪಡಿಸಿಕೊಂಡು ಚಿತ್ರದುರ್ಗ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಘು, ರೇಣುಕಾ ಸ್ವಾಮಿಯ ಅಪಹರಣಕ್ಕೆ ಜಗ್ಗು ಅನ್ನು ಬಳಸಿಕೊಂಡ ಎನ್ನಲಾಗುತ್ತಿದ್ದು, ಇದೀಗ ಆತನ ತಾಯಿ ಹಾಗೂ ಕುಟುಂಬಸ್ಥರು ಟಿವಿ9 ಜೊತೆಗೆ ಈ ಬಗ್ಗೆ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ