ರೇಣುಕಾ ಸ್ವಾಮಿ ಕರೆದೊಯ್ದ ದೃಶ್ಯ ಟೋಲ್ ಗೇಟ್ ಸಿಸಿಟಿವಿಯಲ್ಲಿ ಸೆರೆ
ನಟ ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾ ಸ್ವಾಮಿ (Renuka swami) ಹತ್ಯೆ ಮಾಡಿದ ಕೇಸ್, ದಿನಕ್ಕೊಂದು ತಿರುವು ಪಡೆದುಕೊಂಡು ಸಾಗುತ್ತಿದೆ. ಇದೀಗ ಮೃತ ರೇಣುಕಾ ಅವರನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದೊಯ್ದ ವಿಡಿಯೋ ಗುಯಿಲಾಳು ಟೋಲ್ ಗೇಟ್ ಬಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರವಿ ಇಟಿಎಸ್ ಕಾರಲ್ಲಿ ರೇಣುಕಾಸ್ವಾಮಿ ಕರೆದೊಯ್ಯಲಾಗಿದೆ.
ಚಿತ್ರದುರ್ಗ, ಜೂ.14: ನಟ ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾ ಸ್ವಾಮಿ (Renuka swami) ಹತ್ಯೆ ಮಾಡಿದ ಕೇಸ್, ದಿನಕ್ಕೊಂದು ತಿರುವು ಪಡೆದುಕೊಂಡು ಸಾಗುತ್ತಿದೆ. ಇದೀಗ ಮೃತ ರೇಣುಕಾ ಅವರನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದೊಯ್ದ ವಿಡಿಯೋ ಗುಯಿಲಾಳು ಟೋಲ್ ಗೇಟ್ ಬಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರವಿ ಇಟಿಎಸ್ ಕಾರಲ್ಲಿ ರೇಣುಕಾಸ್ವಾಮಿ ಕರೆದೊಯ್ಯಲಾಗಿದೆ. ಇನ್ನು ಈ ಕುರಿತು ನಿನ್ನೆ(ಜೂನ್ 13)ರ ತಡರಾತ್ರಿ ಚಿತ್ರದುರ್ಗದಲ್ಲಿ ಆರೋಪಿ ರಘು ಅವರನ್ನು ಕರೆತಂದು ಮಹಜರು ಮಾಡಲಾಗಿದೆ. ಚಳ್ಳಕೆರೆ ಗೇಟ್ ಬಳಿ ರೇಣುಕಾ ಸ್ವಾಮಿ ಬೈಕ್ ನಿಲ್ಲಿಸಿದ್ದರು. ಆ ಬಳಿಕ ಅವರ ಕಿಡ್ನ್ಯಾಪ್ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸ್ಥಳಮಹಜರು ಮಾಡಲಾಗಿದೆ. ಎಲ್ಲಿ ಅವರನ್ನು ಕಿಡ್ನ್ಯಾಪ್ ಮಾಡಲಾಯಿತು, ಹೇಗೆ ಕರೆದುಕೊಂಡು ಹೋಗಲಾಯಿತು ಎನ್ನುವುದನ್ನು ರಘು ಅವರು ವಿವರಿಸಿದ್ದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಕೊನೆಗೂ ಪೆನ್ಡ್ರೈವ್ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್ಡಿಕೆ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
