ದರ್ಶನ್-ಪವಿತ್ರಾ ಗೌಡ ಸಂಬಂಧದ ಬಗ್ಗೆ ವಕೀಲರ ಸ್ಪಷ್ಟನೆ
ಕೊಲೆ ಆರೋಪಿ ದರ್ಶನ್ ಪರವಾಗಿ ಅನಿಲ್ ಬಾಬು ವಕಾಲತ್ತು ವಹಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ ಎರಡು ಬಾರಿ ದರ್ಶನ್ ಅವರನ್ನು ಅನಿಲ್ ಬಾಬು ಭೇಟಿ ಆಗಿದ್ದಾರೆ. ಟಿವಿ9 ಜೊತೆ ಮಾತನಾಡಿರುವ ಅನಿಲ್ ಬಾಬು, ದರ್ಶನ್ ಹಾಗೂ ಪವಿತ್ರಾ ಗೌಡ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಕೊಲೆ ಆರೋಪಿ ದರ್ಶನ್ (Darshan Thoogudeepa) ಪರವಾಗಿ ವಕೀಲ ಅನಿಲ್ ಬಾಬು ವಕಾಲತ್ತು ವಹಿಸಿದ್ದಾರೆ. ದರ್ಶನ್ ಬಂಧನವಾದಾಗಿನಿಂದಲೂ ಎರಡು ಬಾರಿ ವಕೀಲರು ದರ್ಶನ್ ಅನ್ನು ಭೇಟಿಯಾಗಿದ್ದಾರೆ. ಪ್ರಕರಣದ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿರುವ ವಕೀಲ ಅನಿಲ್ ಬಾಬು, ಮುಂದಿನ ದಿನಗಳಲ್ಲಿ ತಾವು ತೆಗೆದುಕೊಳ್ಳಲಿರುವ ಕಾನೂನಾತ್ಮಕ ಪ್ರಕ್ರಿಯೆಗಳ ಬಗ್ಗೆ ವಿವರಿಸಿದ್ದಾರೆ. ತಾವು ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಅವರ ತಂದೆ ತಾಯಿ (ದರ್ಶನ್ರ ಅತ್ತೆ-ಮಾವ) ಪರವಾಗಿ ದರ್ಶನ್ ಪರ ವಕಾಲತ್ತು ವಹಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ ದರ್ಶನ್ ಹಾಗೂ ಪವಿತ್ರಾ ಗೌಡ ಸಂಬಂಧದ ಬಗ್ಗೆ ಸ್ಪಷ್ಟೀಕರಣವನ್ನು ಸಹ ವಕೀಲ ಅನಿಲ್ ಬಾಬು ನೀಡಿದ್ದಾರೆ. ಅನಿಲ್ ಬಾಬು ಹೇಳಿಕೆಯ ವಿಡಿಯೋ ಇಲ್ಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 15, 2024 03:07 PM
Latest Videos