‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆಗೆ ಎದುರಾದ ಸವಾಲುಗಳೇನು?

Updated on: Aug 21, 2025 | 2:13 PM

Darshan Thoogudeepa in Jail: ದರ್ಶನ್ ಜೈಲಿನಲ್ಲಿರುವಾಗಲೇ ಅವರ ನಟನೆಯ ‘ಡೆವಿಲ್’ ಸಿನಿಮಾ ಬಿಡುಗಡೆ ಆಗಲಿದೆ. ಈ ಹಿಂದೆ 2011 ರಲ್ಲಿ ದರ್ಶನ್ ಜೈಲಿನಲ್ಲಿರುವಾಗಲೇ ಅವರ ನಟನೆಯ ‘ಸಾರಥಿ’ ಸಿನಿಮಾ ಬಿಡುಗಡೆ ಆಗಿತ್ತು. ಆಗ ಎದುರಾಗಿದ್ದ ಸವಾಲುಗಳೇನು? ಸಿನಿಮಾಕ್ಕೆ ಹಾಕಿದ್ದ ಬಜೆಟ್ ಎಷ್ಟು? ಇತ್ಯಾದಿ ವಿಷಯಗಳನ್ನು ನಿರ್ಮಾಪಕರು ಮಾತನಾಡಿದ್ದಾರೆ.

ದರ್ಶನ್ (Darshan Thoogudeepa) ಈಗ ಜೈಲಿನಲ್ಲಿದ್ದಾರೆ. ಅವರು ಜೈಲಿನಲ್ಲಿದ್ದಾಗಲೇ ‘ಡೆವಿಲ್’ ಸಿನಿಮಾ ಬಿಡುಗಡೆ ಆಗಲಿದೆ. ಅಸಲಿಗೆ ದರ್ಶನ್ ಜೀವನದಲ್ಲಿ ಇದು ಎರಡನೇ ಬಾರಿ ಅವರು ಜೈಲಿನಲ್ಲಿದ್ದಾಗ ಅವರ ಸಿನಿಮಾ ಬಿಡುಗಡೆ ಆಗುತ್ತಿರುವುದು. 2011 ರಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದರು. ಅದೇ ಸಮಯದಲ್ಲಿ ಅವರ ನಟನೆಯ ‘ಸಾರಥಿ’ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾದ ನಿರ್ಮಾಪಕ ಇದೀಗ ಹಳೆಯ ನೆನಪುಗಳನ್ನು ಕೆದಕಿದ್ದಾರೆ. ‘ಸಾರಥಿ’ ಸಿನಿಮಾದ ಬಜೆಟ್ ಎಷ್ಟಿತ್ತು? ಬಿಡುಗಡೆ ಹೇಗಾಯ್ತು ಎಂದು ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ