‘ಕಾಟೇರ’ಗೆ ಕೌಂಟ್ಡೌನ್ ಶುರು, ತಲೆ ಎತ್ತಿವೆ ದರ್ಶನ್ ಕಟೌಟ್
Darshan: ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಕೆಲವೇ ಗಂಟೆಗಳಲ್ಲಿ ಬಿಡುಗಡೆ ಆಗಿದ್ದು, ಸಿನಿಮಾವನ್ನು ಸ್ವಾಗತಿಸಲು ಅಭಿಮಾನಿಗಳು ಮಾಡಿರುವ ಸಿದ್ಧತೆ ನೋಡಿ ಹೇಗಿದೆ...
ದರ್ಶನ್ (Darshan) ನಟನೆಯ ‘ಕಾಟೇರ’ (Kaatera) ಸಿನಿಮಾ ಡಿಸೆಂಬರ್ 29ಕ್ಕೆ ಬಿಡುಗಡೆ ಆಗಲಿದೆ. ಮಧ್ಯ ರಾತ್ರಿಯಿಂದಲೇ ಶೋಗಳು ಪ್ರಾರಂಭವಾಗಲಿವೆ. ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಸ್ವಾಗತಿಸಲು ತಯಾರಾಗಿದ್ದಾರೆ. ಚಿತ್ರಮಂದಿರಗಳನ್ನು ಸಿಂಗರಿಸಿ, ದರ್ಶನ್ರ ದೊಡ್ಡ-ದೊಡ್ಡ ಕಟೌಟ್ಗಳನ್ನು ನಿಲ್ಲಿಸಿದ್ದಾರೆ. ‘ಕಾಟೇರ’ ಸಿನಿಮಾವು ನಿಜ ಘಟನೆಗಳಿಂದ ಪ್ರೇರಿತವಾಗಿದ್ದು ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ನಟಿಸಿದ್ದಾರೆ. ಇದು ಅವರ ಮೊದಲ ಸಿನಿಮಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 28, 2023 09:58 PM