ಎರಡು ತಿಂಗಳು ರಾಜಾತಿಥ್ಯ ಸವಿದ ದಸರಾ ಆನೆಗಳಿಗೆ ಕಾಡಿಗೆ ವಾಪಸ್ಸಾಗುವ ಮನಸ್ಸು ಬರುತ್ತಿಲ್ಲ!

|

Updated on: Oct 14, 2024 | 5:09 PM

ಆನೆಗಳ ನಿಷ್ಠೆ ಮತ್ತು ಜನರೆಡೆಗಿನ ಪ್ರೀತಿಯನ್ನು ಇಲ್ಲಿ ನೋಡಬಹುದು. ಗುಂಪಿನಲ್ಲಿದ್ದ ಚಿಕ್ಕ ಆನೆ ಅರಮನೆ ಆವರಣದಿಂದ ಹೊರಡುವ ಮೊದಲು ನೆರೆದಿದ್ದ ಜನರತ್ತ ನೋಡಿ ಪೊಡಮಟ್ಟುತ್ತದೆ ಅಂದರೆ ಸೊಂಡಿಲೆತ್ತಿ ನಮಸ್ಕಾರ ಮಾಡುತ್ತದೆ. ಜನರಿಗೆ ಕೃತಜ್ಞತೆಯನ್ನು ಸಲ್ಲಿಸುವ ಆನೆಯ ಮನಸ್ಥಿತಿ ಮನಮುಟ್ಟುತ್ತದೆ.

ಮೈಸೂರು: ಮೈಸೂರು ಭಾಗದ ಅರಣ್ಯಾಧಿಕಾರಿ ಡಾ ಐಬಿ ಪ್ರಭುಗೌಡ ಹೇಳುವ ಹಾಗೆ ಅನೆಗಳು ನಿಸ್ಸಂದೇಹವಾಗಿ ಭಾವುಕ ಜೀವಿಗಳು. ದಸರಾ ಮಹೋತ್ಸವಕ್ಕಾಗಿ ಎರಡು ತಿಂಗಳು ಹಿಂದೆ ಕಾಡಿನಿಂದ ಬಂದು ಮೈಸೂರಲ್ಲಿ ನೆಲೆಸಿದ್ದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳಿಗೆ ವಾಪಸ್ಸು ಕಾಡಿಗೆ ಹೋಗಲು ಕಿಂಚಿತ್ತೂ ಮನಸ್ಸಿಲ್ಲ. ಮೈಸೂರಲ್ಲಿ ದೊರೆತ ರಾಜ್ಯಾತಿಥ್ಯ ಕೂಡ ಹಾಗಿತ್ತು. ಹಾಗಾಗೇ, ಈ ಆನೆ ಹತ್ತಿದ ಲಾರಿಯನ್ನು ಇಳಿಯುತ್ತದೆ. ಮಾವುತರು ಮತ್ತು ಕಾವಾಡಿಗರು ಬಹಳ ಕಷ್ಟಪಟ್ಟು ಅದನ್ನು ಪುನಃ ಟ್ರಕ್ ಹತ್ತಿಸುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್; ವಿಡಿಯೋ ನೋಡಿ

Follow us on