‘ನಮ್ಮದು ತಪ್ಪಿದ್ದರೆ ತಿದ್ದುಕೊಳ್ಳುತ್ತೇವೆ’: ಪ್ರಮೋದಾದೇವಿ ಆರೋಪಕ್ಕೆ ಸಿಎಂ ಡಿಕೆ ಶಿವಕುಮಾರ್​​ ಸ್ಪಷ್ಟನೆ

Edited By:

Updated on: Oct 27, 2026 | 12:00 PM

ಮೈಸೂರು ದಸರಾ ಕುರಿತು ರಾಜವಂಶಸ್ಥೆ ಪ್ರಮೋದಾದೇವಿ ಅವರ ಅಸಮಾಧಾನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ದಸರಾ ನಾಡಹಬ್ಬವಾಗಿದ್ದು, ಸರ್ಕಾರದಿಂದ ಯಾವುದೇ ಲೋಪವಾಗಿದ್ದರೆ ಸರಿಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದು ನನ್ನ, ಪ್ರಮೋದಾ ದೇವಿ ವಿಚಾರ ಅಲ್ಲ, ರಾಜ್ಯದ ವಿಚಾರ. ನನಗೆ ಇತಿಹಾಸ ಗೊತ್ತಿಲ್ಲ ಪರಂಪರೆಯಂತೆ ಮಾಡಿದ್ದೇವೆ ಎಂದವರು ಹೇಳಿದ್ದಾರೆ.

ಬೆಳಗಾವಿ, ಅಕ್ಟೋಬರ್​​ 27: ಮೈಸೂರು ದಸರಾ ಬಗ್ಗೆ ಪ್ರಮೋದಾದೇವಿ ಅಸಮಾಧಾನ ವಿಚಾರ ಸಮಭಂಧ ಸಿಎಂ ಡಿಕೆ ಶಿವಕುಮಾರ್​​ ಪ್ರತಿಕ್ರಿಯಿಸಿದ್ದಾರೆ. ಪ್ರಮೋದಾದೇವಿ ಹೇಳಿಕೆ ನೋಡಿಲ್ಲ. ಆದರೆ ಮೊದಲಿನಿಂದಲೂ ಏನು ಪದ್ಧತಿ ಇದೆಯೋ ಅದೇ ರೀತಿ ಆಚರಣೆ ಮಾಡಿದ್ದೇವೆ. ಪ್ರಮೋದಾದೇವಿ ಏನು ಹೇಳಿದ್ದಾರೆ ಗಮನಿಸಿ ಚರ್ಚೆ ಮಾಡ್ತೇನೆ. ಇದು ನನ್ನ, ಪ್ರಮೋದಾ ದೇವಿ ವಿಚಾರ ಅಲ್ಲ, ರಾಜ್ಯದ ವಿಚಾರ. ಈ ಬಾರಿ ದಸರಾದಲ್ಲಿ ಪ್ರಶಾಂತ ಆನೆ ಅಂಬಾರಿ ಹೊತ್ತಿದ್ದಾನೆ. ಶಿವಮೊಗ್ಗದಲ್ಲಿ ಏನಾಯಿತು ಅಂತಾ ನೋಡಿದ್ದೀರಿ ಅಲ್ವಾ? ಸಚಿವರು ಬಂದು ತಮಗೆ ವಹಿಸಿದ ಕೆಲಸವನ್ನು ನಿರ್ವಹಿಸಿದ್ದಾರೆ. ಇನ್ನೂ ಕೆಲವರು ಚುನಾವಣೆ ನಿಮಿತ್ತ ಹೋಗಲು ಆಗಿಲ್ಲ. ದಸರಾ ನಾಡಹಬ್ಬ, ನಾಡಿನ ದೇವತೆಗೆ ಗೌರವ ಕೊಡಬೇಕು. ಇದು ಡಿಕೆಶಿ ಕಾರ್ಯಕ್ರಮ ಅಲ್ಲ, ಸರ್ಕಾರದ ಕಾರ್ಯಕ್ರಮ. ನಮ್ಮದು ತಪ್ಪಿದ್ದರೆ ತಿದ್ದುಕೊಳ್ಳುತ್ತೇವೆ. ನನಗೆ ಇತಿಹಾಸ ಗೊತ್ತಿಲ್ಲ ಪರಂಪರೆಯಂತೆ ಮಾಡಿದ್ದೇವೆ ಎಂದವರು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More