Dattanna: ‘ರಾಘವೇಂದ್ರ ಸ್ಟೋರ್ಸ್​ ಬಹಳ ಕಷ್ಟವಾದ ಚಿತ್ರ’: ಸಕ್ಸಸ್​ ಬಳಿಕ ತೆರೆ ಹಿಂದಿನ ವಿಷಯಗಳ ಬಗ್ಗೆ ದತ್ತಣ್ಣ ಮಾತು

Updated on: May 04, 2023 | 12:12 PM

Raghavendra Stores: ‘ರಾಘವೇಂದ್ರ ಸ್ಟೋರ್ಸ್​ ಸಾಮಾನ್ಯ ಸಿನಿಮಾ ಅಲ್ಲ. ಇದರಲ್ಲಿ ಪ್ರತಿಪಾದಿಸಿರುವ ವಿಷಯದಲ್ಲಿ ಹೊಸತನ ಇದೆ’ ಎಂದು ನಟ ದತ್ತಣ್ಣ ಹೇಳಿದ್ದಾರೆ.

ಹಿರಿಯ ನಟ ದತ್ತಣ್ಣ (Dattanna) ಅವರು ಈಗಲೂ ಬಹುಬೇಡಿಕೆಯ ಕಲಾವಿದನಾಗಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು ನಟಿಸಿದ ‘ರಾಘವೇಂದ್ರ ಸ್ಟೋರ್ಸ್​’ (Raghavendra Stores) ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ಸು ಕಂಡಿದೆ. ಈ ಚಿತ್ರದ ಸಕ್ಸಸ್​ ಮೀಟ್​ನಲ್ಲಿ ದತ್ತಣ್ಣ ಮಾತನಾಡಿದ್ದಾರೆ. ‘ಇದು ಸಾಮಾನ್ಯ ಸಿನಿಮಾ ಅಲ್ಲ. ಇದರಲ್ಲಿ ಪ್ರತಿಪಾದಿಸಿರುವ ವಿಷಯದಲ್ಲಿ ಹೊಸತನ ಇದೆ. ನಿರ್ದೇಶಕರು ಯಾಕೆ ಇಂಥ ವಿಷಯ ಆಯ್ಕೆ ಮಾಡಿಕೊಂಡರು ಎಂಬ ಬಗ್ಗೆ ನನಗೆ ಕುತೂಹಲ ಇದೆ. ಜಗ್ಗೇಶ್​ (Jaggesh) ಅವರು ಇಡೀ ಸಿನಿಮಾವನ್ನು ತಮ್ಮ ಹೆಗೆಲ ಮೇಲೆ ಹೊತ್ತುಕೊಂಡು ಸಾಗಿದ್ದಾರೆ’ ಎಂದು ದತ್ತಣ್ಣ ಹೇಳಿದ್ದಾರೆ. ಈ ಚಿತ್ರಕ್ಕೆ ‘ಹೊಂಬಾಳೆ ಫಿಲ್ಮ್ಸ್​’ ಬಂಡವಾಳ ಹೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More