Loading video

ಅತ್ತೆ ಸೊಸೆ ಜಗಳ: ಬೆಳಗಾವಿಯಲ್ಲಿ ಅತ್ತೆ ಮೇಲೆ ಕುಡುಗೋಲಿಂದ ಹಲ್ಲೆ ಮಾಡಿದ ಸೊಸೆ ಶಿಲ್ಪಾ ನಾಗರಾಜ್

|

Updated on: Mar 20, 2025 | 11:36 AM

ಜಾನವ್ವ ಮತ್ತು ಶಿಲ್ಪಾ ನಾಗರಾಜ್ ನಡುವೆ ಜಗಳ ಅಪರೂಪವೇನಲ್ಲ, ಇವರು ಜಗಳ ಮಾಡಿ ಹಲವು ಬಾರಿ ಪೊಲೀಸ್ ಠಾಣೆಗೂ ಹೋಗಿದ್ದಿದೆ. ನಿನ್ನೆಯ ಜಗಳಕ್ಕೆ ಕಾರಣವೇನು ಗೊತ್ತಾ? ಶಿಲ್ಪಾಳ ಗಂಡ ನಾಗರಾಜ್ ತನ್ನಮ್ಮ ಜಾನವ್ವ ಮನೆಗೆ ಊಟಕ್ಕೆ ಹೋಗಿದ್ದು! ಅಲ್ಲಿಗೆ ಯಾಕೆ ಹೋಗಿದ್ದೆ ಅಂತ ಶಿಲ್ಪಾ ಗಂಡನ ಜೊತೆ ಜಗಳ ಮಾಡುವಾಗ ಜಾನವ್ವ ಮಗನ ಪರ ಮಾತಾಡಲು ಹೋಗಿದ್ದಾರೆ. ಆಗಲೇ ಶಿಲ್ಪಾ ಕುಡಗೋಲಿನಿಂದ ಹಲ್ಲೆ ಮಾಡಿದ್ದಾಳೆ.

ಬೆಳಗಾವಿ, ಮಾರ್ಚ್ 20:  ಅತ್ತೆ-ಸೊಸೆ ನಡುವೆ ಜಗಳ ಅಂದಕಾಲತ್ತಿಲ್ ನಡೆದುಕೊಂಡು ಬಂದಿರುವ ಸಂಗತಿ, ಹೊಸದೇನಲ್ಲ. ಬೆಳಗಾವಿ ತಾಲೂಕಿನ ಮಾವಿನಕಟ್ಟೆ ಹೆಸರಿನ ಗ್ರಾಮದಲ್ಲಿ ಜಾನವ್ವ ಹುದಲಿ (Janavva Hudali) ಹೆಸರಿನ ವಯೋವೃದ್ಧೆ ಅತ್ತೆಯ ಮೇಲೆ ಸೊಸೆ ಶಿಲ್ಪಾ ನಾಗರಾಜ್ ಕುಡಗೋಲಿನಿಂದ ಹಲ್ಲೆ ಮಾಡಿದ್ದಾಳೆ. ಕೈಗೆ ಗಂಭೀರ ಗಾಯದೊಂದಿಗೆ ಜಾನವ್ವ ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾಧ್ಯಮಗಳಿಗೆ ಅವರು ನಡೆದ ಘಟನೆಯನ್ನು ವಿವರಿಸಿದ್ದಾರಾದರೂ ಮಾತು ಅಸ್ಪಷ್ಟ. ಬೆಳಗಾವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹಾಡಹಗಲೆ ಕುಡಗೋಲಿನಿಂದ ಕೊಚ್ಚಿ ಅತ್ತಿಗೆಯ ಕೊಲೆ ಮಾಡಿದ ಮೈದುನ

Published on: Mar 20, 2025 10:52 AM