ದಾವಣಗೆರೆಯ ರಾಕ್ಷಸ ಮೋಹನ್ ಕುಮಾರ, 6-ತಿಂಗಳು ಗರ್ಭಿಣಿಯಾಗಿದ್ದ ಪತ್ನಿಯ ಶೀಲ ಶಂಕಿಸಿ ಕೊಂದುಬಿಟ್ಟ!
ಸುಂದರ ಮತ್ತು ಕೇವಲ 21-ವರ್ಷ-ವಯಸ್ಸಿನ ಮಗಳನ್ನು ಕಳೆದುಕೊಂಡಿರುವ ವೃದ್ಧ ತಂದೆ-ತಾಯಿಗಳು ಮಗಳ ಸಾವಿನ ದುಃಖ, ಯಾತನೆ ಮತ್ತು ನೋವನ್ನುಬದುಕಿರುವವರೆಗೆ ಅನುಭವಿಸಲಿದ್ದಾರೆ.
ದಾವಣಗೆರೆ: ಪತ್ನಿಯ ಶೀಲ ಶಂಕಿಸಿ ನಮ್ಮ ದೇಶದಲ್ಲಿ ನಡೆಯುವ ಕೊಲೆಗಳು ಒಂದೆರಡಲ್ಲ. ಅವು ಹಿಂದೆ ನಡೆಯುತ್ತಿದ್ದವು, ಮುಂದೆಯೂ ನಡೆಯುತ್ತವೆ. ಕೀಳರಿಮೆಯಿಂದ ಬಳಲುವ ದಾವಣಗೆರೆಯ ಮೋಹನ್ ಕುಮಾರನಂಥ (Mohan Kumar) ಹೇಡಿಗಳ ಸಂಖ್ಯೆ ಸಮಾಜದಲ್ಲಿ ಹೆಚ್ಚಿರುವುದರಿಂದ ಅಮಾಯಕ ಮತ್ತು ಅಬಲೆ ಮಹಿಳೆಯರ ಕೊಲೆಗಳು ನಿಲ್ಲಲಾರವು. ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಗಂಗಗೊಂಡನಹಳ್ಳಿಯ (Gangagondanahalli) ನಿವಾಸಿಯಾಗಿರುವ ಮೋಹನ್, 6 ತಿಂಗಳು ಗರ್ಭಿಣಿಯಾಗಿದ್ದ ತನ್ನ ಪತ್ನಿ ಅಪವಿತ್ರೆ ಎಂದು ಭಾವಿಸಿ ಅವಳ ಕೊಲೆಗಾಗಿ ಪೂರ್ವನಿಯೋಜನೆ ಮಾಡಿಕೊಂಡು ಆಕೆಯನ್ನು ಕೊಂದು ಚಿಕ್ಕಮಗಳೂರು (Chikmagalur) ಜಿಲ್ಲೆಯ ಶಿರಗಲಿಪುರ ಅರಣ್ಯ ಪ್ರದೇಶದಲ್ಲಿ ಶವವನ್ನು ಹೂತು ಹಾಕಿದ್ದಾನೆ. ಪೊಲೀಸರ ಮುಂದೆ ಅವನು ತಾನೆನಸಗಿರುವ ಅಪರಾಧ ಒಪ್ಪಿಕೊಂಡಿದ್ದಾನೆ. ಅದರೇನು ಬಂತು, ತಮ್ಮ ಸುಂದರ ಮತ್ತು ಕೇವಲ 21-ವರ್ಷ-ವಯಸ್ಸಿನ ಮಗಳನ್ನು ಕಳೆದುಕೊಂಡಿರುವ ವೃದ್ಧ ತಂದೆ-ತಾಯಿಗಳು ಮಗಳ ಸಾವಿನ ದುಃಖ, ಯಾತನೆ ಮತ್ತು ನೋವನ್ನುಬದುಕಿರುವವರೆಗೆ ಅನುಭವಿಸಲಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ