ದಾವಣಗೆರೆ: ಹಳೇ ಪೇಟೆ ವೀರಭದ್ರೇಶ್ವರ ಕೊಂಡ ಹಾಯ್ದ ಸಚಿವ ಮಲ್ಲಿಕಾರ್ಜುನ, ಪುತ್ರ ಸಮರ್ಥ್, ಪುತ್ರಿ ಶ್ರೇಷ್ಠ!

Edited By:

Updated on: Apr 01, 2026 | 11:29 AM

ದಾವಣಗೆರೆ ಹಳೇ ಪೇಟೆಯ ಶ್ರೀ ವೀರಭದ್ರೇಶ್ವರ ಸ್ವಾಮಿ ಕೊಂಡೋತ್ಸವದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮತ್ತು ಕುಟುಂಬಸ್ಥರು ಪಾಲ್ಗೊಂಡರು. ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಸಮರ್ಥ್ ಶಾಮನೂರು ಹಾಗೂ ಶ್ರೇಷ್ಠ ಅವರು ಅಗ್ನಿಕುಂಡ ಹಾಯ್ದು ವಿಶೇಷ ಪೂಜೆ ಸಲ್ಲಿಸಿದರು. ಸಚಿವರ ಕುಟುಂಬ ಅಗ್ನಿಕುಂಡ ಹಾಯ್ದ ವಿಡಿಯೋ ಇಲ್ಲಿದೆ ನೋಡಿ.

ದಾವಣಗೆರೆ, ಎಪ್ರಿಲ್ 1: ನಗರದ ಹಳೇ ಪೇಟೆಯಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಕೊಂಡೋತ್ಸವವು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಕುಟುಂಬದೊಂದಿಗೆ ಭಾಗವಹಿಸಿ, ಅಗ್ನಿಕುಂಡ ಹಾಯುವ ಮೂಲಕ ದೈವಭಕ್ತಿ ಮೆರೆದರು. ವಿಶೇಷವೆಂದರೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣದಲ್ಲಿರುವ ಸಚಿವರ ಪುತ್ರ ಸಮರ್ಥ್ ಶಾಮನೂರು ಮತ್ತು ಪುತ್ರಿ ಶ್ರೇಷ್ಠ ಕೂಡ ತಂದೆಯೊಂದಿಗೆ ಕೊಂಡ ಹಾಯ್ದರು. ಕೊಂಡೋತ್ಸವಕ್ಕೂ ಮುನ್ನ ಸಚಿವ ಮಲ್ಲಿಕಾರ್ಜುನ ಅವರ ಕುಟುಂಬವು ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಕ್ಷೇತ್ರದ ಏಳಿಗೆಗಾಗಿ ಪ್ರಾರ್ಥಿಸಿತು. ಉಪಚುನಾವಣೆಯ ಪ್ರಚಾರದ ನಡುವೆಯೇ ಸಚಿವರ ಕುಟುಂಬ ಈ ರೀತಿ ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದು ಬೆಂಬಲಿಗರಲ್ಲಿ ಉತ್ಸಾಹ ತುಂಬಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us