ಡಿಕೆ ಶಿವಕುಮಾರ್ ಭೇಟಿಯಾಗಿ ದಾವಣಗೆರೆ ರೈತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಆಗ್ರಹಿಸಿದ ಸಂಸದ ಜಿಎಂ ಸಿದ್ದೇಶ್ವರ

ಅರುಣ್​ ಕುಮಾರ್​ ಬೆಳ್ಳಿ

Updated on: Oct 13, 2023 | 12:47 PM

ದಾವಣಗೆರೆಯಲ್ಲೂ ತೀವ್ರ ಕೊರತೆ ಮಳೆಯ ಕಾರಣ ರೈತರು ಸಂಕಷ್ಟದಲ್ಲಿದ್ದು ಅವರ ಸ್ಥಿತಿಗೆ ಸ್ಪಂದಿಸಬೇಕೆಂದು ಸಿದ್ದೇಶ್ವರ ಆಗ್ರಹಿದರು ಎನ್ನಲಾಗಿದೆ. ಆಫ್ ಮತ್ತು ಆನ್ ಪದ್ಧತಿಯನ್ನು ಕೈಬಿಟ್ಟು ಭದ್ರಾ ಕಾಲುವೆಗೆ ನೀರು ಹರಿಸುವಂತೆಯೂ ಬಿಜೆಪಿ ನಾಯಕರು ಶಿವಕುಮಾರ್ ರನ್ನು ಒತ್ತಾಯಿಸಿದ್ದಾರೆ.

ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ಹಾಲಿ ಮತ್ತು ಮಾಜಿ ಶಾಸಕರ ಬಳಿಕ ಬಿಜೆಪಿ ಸಂಸದರೂ ಈಗ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಲಾರಂಭಿಸಿದ್ದಾರೆ. ದಾವಣಗೆರೆಯ ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ ಇಂದು ಬೆಂಗಳೂರಲ್ಲಿ ಶಿವಕುಮಾರ್ ಅವರನ್ನು ಭೇಟಿಯಾದರು. ಬಿಜೆಪಿ ಶಾಸಕ ಬಿಪಿ ಹರೀಶ್ ಮತ್ತು ಇತರ ಕಾರ್ಯಕರ್ತರೊಂದಿಗೆ ಅವರು ಉಪ ಮುಖ್ಯಮಂತ್ರಿಯನ್ನು ಬೇಟಿಯಾದರು. ಆದರೆ, ಎಲ್ಲದಕ್ಕೂ ರಾಜಕೀಯದ ಬಣ್ಣ ಕಟ್ಟುವ ಅಗತ್ಯವಿಲ್ಲ ಮಾರಾಯ್ರೇ. ಅಸಲಿಗೆ ಸಿದ್ದೇಶ್ವರ ಮತ್ತು ಹರೀಶ್; ದಾವಣಗೆರೆ ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಶಿವಕುಮಾರೊಂದಿಗೆ ಚರ್ಚಿಸಲು ಆಗಮಿಸಿದ್ದರು. ದಾವಣಗೆರೆಯಲ್ಲೂ ತೀವ್ರ ಕೊರತೆ ಮಳೆಯ ಕಾರಣ ರೈತರು ಸಂಕಷ್ಟದಲ್ಲಿದ್ದು ಅವರ ಸ್ಥಿತಿಗೆ ಸ್ಪಂದಿಸಬೇಕೆಂದು ಸಿದ್ದೇಶ್ವರ ಆಗ್ರಹಿದರು ಎನ್ನಲಾಗಿದೆ. ಆಫ್ ಮತ್ತು ಆನ್ ಪದ್ಧತಿಯನ್ನು ಕೈಬಿಟ್ಟು ಭದ್ರಾ ಕಾಲುವೆಗೆ ನೀರು ಹರಿಸುವಂತೆಯೂ ಬಿಜೆಪಿ ನಾಯಕರು ಶಿವಕುಮಾರ್ ರನ್ನು ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.