ದಾವಣಗೆರೆ: ಹರಿಹರದ ಮನೆಯಲ್ಲಿ ಟೈಲ್ಸ್ ಕೆಳಗೆ ನಿಗೂಢ ಶಾಖ! ಬೆಚ್ಚಿಬಿದ್ದ ಮನೆ ಮಂದಿ

Edited By:

Updated on: Nov 17, 2025 | 9:58 AM

ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ರಾಜಾರಾಮ್ ಕಾಲೋನಿಯಲ್ಲಿರುವ ಶಿಕ್ಷಕ ಮಾಲೇಶ್ ಅವರ ಮನೆಯಲ್ಲಿ ನಿಗೂಢ ಘಟನೆಯೊಂದು ನಡೆದಿದೆ. ಮನೆಯ ಹಾಲ್‌ನಲ್ಲಿರುವ ಟೈಲ್ಸ್‌ಗಳ ಕೆಳಭಾಗದಿಂದ ಶಾಖ ಉತ್ಪತ್ತಿಯಾಗುತ್ತಿದ್ದು, ನೀರು ಹಾಕಿದರೆ ಆವಿಯಾಗುತ್ತಿದೆ. ಈ ವಿಚಿತ್ರ ವಿದ್ಯಮಾನದ ಕುರಿತು ಪೊಲೀಸರು ಮತ್ತು ಭೂಗರ್ಭಶಾಸ್ತ್ರ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ, ಆದರೆ ಕಾರಣ ಇನ್ನೂ ತಿಳಿದುಬಂದಿಲ್ಲ.

ದಾವಣಗೆರೆ, ನವೆಂಬರ್ 17: ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ರಾಜಾರಾಮ್ ಕಾಲೋನಿಯಲ್ಲಿರುವ ಶಿಕ್ಷಕ ಮಾಲೇಶ್ ಅವರ ಮನೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮನೆಯ ಹಾಲ್‌ನಲ್ಲಿ ಟೈಲ್ಸ್‌ಗಳ ಕೆಳಭಾಗದಿಂದ ಇದ್ದಕ್ಕಿದ್ದಂತೆ ಶಾಖ ಉತ್ಪತ್ತಿಯಾಗುತ್ತಿದೆ. ಈ ಭಾಗದಲ್ಲಿ ನೀರು ಸುರಿದರೆ ಆವಿಯಾಗಿ ಹೋಗುತ್ತಿರುವುದು ಮನೆಯವರ ಆತಂಕಕ್ಕೆ ಕಾರಣವಾಗಿದೆ. ಈ ನಿಗೂಢ ಶಾಖದ ಅನುಭವವಾಗುತ್ತಿದ್ದಂತೆಯೇ ಮಾಲೇಶ್ ಅವರ ಮನೆಯವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ, ಅವರು ಭೂಗರ್ಭಶಾಸ್ತ್ರ ತಜ್ಞರಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿ ಪ್ರಥಮ ಹಂತದ ಪರಿಶೀಲನೆ ನಡೆಸಿದ್ದಾರೆ.

ಟೈಲ್ಸ್‌ಗಳಲ್ಲಿ ಒಂದು ಭಾಗದಿಂದ ಪ್ರಾರಂಭವಾದ ಶಾಖ ಈಗ ಮೂರು ಟೈಲ್ಸ್‌ಗಳವರೆಗೆ ವ್ಯಾಪಿಸಿದೆ ಎಂದು ವರದಿಯಾಗಿದೆ. ಈ ವಿದ್ಯಮಾನಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ಪತ್ತೆಯಾಗಿಲ್ಲ. ಭೂಗರ್ಭಶಾಸ್ತ್ರ ತಜ್ಞರಿಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ