ದಾವಣಗೆರೆಯಲ್ಲಿ ರೌಡಿಶೀಟರ್ ಗಳ ಮನೆ ಮೇಲೆ ದಾಳಿ ನಡೆಸಿ ಪೊಲೀಸರಿಂದ ತಪಾಸಣೆ
ಪೊಲೀಸ್ ಅಧಿಕಾರಿ ಮತ್ತು ರೌಡಿಶೀಟರ್ ನಡುವೆ ನಡೆಯುವ ಸ್ವಾರಸ್ಯಕರ ಸಂಭಾಷಣೆಯನ್ನು ಕೇಳಿ. ಹೊಟ್ಟೆಪಾಡಿಗೆ ಏನು ಮಾಡಿಕೊಂಡಿದ್ದೀಯ ಅಂತ ಅಧಿಕಾರಿ ಕೇಳಿದರೆ ರೌಡಿ ಕುರಿ ಕಾಯ್ತೀನಿ ಅನ್ನುತ್ತಾನೆ. ಎಷ್ಟಿವೆ ಕುರಿ ಅಂತ ಕೇಳಿದರೆ ಒಂದು ಅನ್ನುತ್ತಾನೆ. ಅವನು ಹೇಳುವ ಟಗರು ಮನೆಗಂಟಿಕೊಂಡಿರುವ ಶೆಡ್ನಲ್ಲಿ ಕಟ್ಟಿಹಾಕಿದ್ದು ಕಾಣಿಸುತ್ತದೆ. ನಾಯಿಗಳೂ ಅವನ ಶೆಡ್ನಲ್ಲಿವೆ.
ದಾವಣಗೆರೆ, ಮೇ 15: ದಾವಣಗೆರೆ ನಗರದಲ್ಲಿರುವ 46 ರೌಡಿಶೀಟರ್ ಮನೆಗಳ ಮೇಲೆ ಇಂದು ಬೆಳ್ಳಂಬೆಳಗ್ಗೆಯೇ ನಗರದ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಕುಖ್ಯಾತ ರೌಡಿಯೆನಿಸಿಕೊಂಡಿರುವ ಗಾರೆ ಮಂಜನ ಮನೆಯಲ್ಲಿ ಪೊಲೀಸರು ತಪಾಸಣೆ ನಡೆಸತ್ತಿರುವುದನ್ನು ದೃಶ್ಯಗಳಲ್ಲಿ ವೀಕ್ಷಿಸಬಹುದು. ಡೆಪ್ಯೂಟಿ ಪೊಲೀಸ್ ವರಿಷ್ಠಾಧಿಕಾರಿ ಶರಣಬಸವೇಶ್ವರ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ರವಿನಾಯ್ಕ್ ನೇತೃತ್ವದಲ್ಲಿ ಪೊಲೀಸ್ ದಾಳಿ ನಡೆಯಿತು ಎಂದು ನಮ್ಮ ದಾವಣಗೆರೆ ವರದಿಗಾರ ಮಾಹಿತಿ ನೀಡುತ್ತಾರೆ. ಗಾರೆ ಮಂಜನ ವಿರುದ್ಧ ಕೊಲೆ ದರೋಡೆ, ಜೀವ ಬೆದರಿಕೆ ಸೇರಿದಂತೆ ಒಟ್ಟು 12 ಕೇಸ್ಗಳಿವೆಯಂತೆ.
ಇದನ್ನೂ ಓದಿ: ದಾವಣಗೆರೆ ರೌಡಿಶೀಟರ್ ಸಂತೋಷ್ ಹತ್ಯೆ ಪ್ರಕರಣ: ಆರೋಪಿಗಳು ಪೊಲೀಸರ ಮುಂದೆ ಶರಣು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ