ಅಡಿಕೆಗೆ ಬಂಪರ್ ಬೆಲೆ: ತೋಟಕ್ಕೆ ಹೈ ಸೆಕ್ಯುರಿಟಿ ನೀಡಿದ ರೈತ

Edited By:

Updated on: Jan 29, 2026 | 12:31 PM

ಅಡಿಕೆ ಬೆಲೆ ಏರಿಕೆ ನಡುವೆಯೂ ದಾವಣಗೆರೆ ರೈತರಿಗೆ ಕಳ್ಳತನದ ಕಾಟ ಹೆಚ್ಚಾಗಿದೆ. ಕೊಳೆ ರೋಗದ ಚಿಂತೆಯ ಜೊತೆಗೆ ಕಳ್ಳರ ಕಾಟ ರೈತರನ್ನು ಹೈರಾಣಾಗಿಸಿದೆ. ಇದನ್ನು ತಡೆಯಲು ರೈತರು ಹೊಸ ಮಾಸ್ಟರ್‌ಪ್ಲಾನ್ ಅಳವಡಿಸಿಕೊಂಡಿದ್ದಾರೆ. ಅಡಿಕೆ ತೋಟಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ, ಅಪರಿಚಿತರ ಓಡಾಟವನ್ನು ಪತ್ತೆಹಚ್ಚಿ ಮೊಬೈಲ್‌ಗೆ ಸಂದೇಶ ಪಡೆಯುತ್ತಿದ್ದಾರೆ. ಈ ತಂತ್ರಜ್ಞಾನದಿಂದ ಅಡಿಕೆ ಕಳ್ಳತನಕ್ಕೆ ಪರಿಣಾಮಕಾರಿ ಕಡಿವಾಣ ಹಾಕಲು ಸಾಧ್ಯವಾಗಿದೆ.

ದಾವಣಗೆರೆ, ಜ.29: ಅಡಿಕೆಗೆ ಕೊಳೆ ರೋಗದ ನಡುವೆಯೂ ಬೆಲೆ ಏರಿಕೆ ಆಗಿರುವುದು ಅಚ್ಚರಿ ಸಂಗತಿ, ಆದರೆ ರೈತರಿಗೆ ಇದರ ಬಗ್ಗೆ ಒಂದಲ್ಲ ಒಂದು ತಲೆನೋವು ಇದ್ದೇ ಇದೆ. ಇಷ್ಟು ದಿನ ಕೊಳೆ ರೋಗ ಬಗ್ಗೆ ಚಿಂತೆ ಮಾಡುತ್ತಿದ್ದ ರೈತರು. ಇದೀಗ ಕಳ್ಳರ ಕಾಟಕ್ಕೆ ಕಂಗಾಲಾಗಿದ್ದಾರೆ. ಕೊಳೆ ರೋಗದ ನಡುವೆಯೂ ಅಡಿಕೆ ದರ ಏರಿಕೆ ಆಗಿದೆ. ಈ ಬಗ್ಗೆ ಸ್ವಲ್ಪ ಸಂತೋಷ ಪಡುವ ಸಮಯದಲ್ಲೇ ರೈತರಿಗೆ ಕಳ್ಳರು ಕಾಟ ಎದುರಾಗಿದೆ. ಇದೀಗ ಕಳ್ಳರನ್ನು ಪತ್ತೆ ಮಾಡಲು ಹಾಗೂ ಅಡಿಕೆಗೆ ಟೈಟ್​​ ಸೆಕ್ಯುರಿಟಿ ನೀಡಲು ರೈತರು ಹೊಸ ಪ್ಲಾನ್​​ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಅಡಿಕೆ ಕಳ್ಳತನ ತಡೆಗೆ ರೈತರ ‌ಮಾಸ್ಟರ್‌ಪ್ಲಾನ್ ಮಾಡಿದ್ದಾರೆ. ಅಡಿಕೆ ತೋಟಕ್ಕೆ ಇದೀಗ ಸಿಸಿ ಕ್ಯಾಮರಾ ಬಂದಿದೆ. ಅಡಿಕೆ ತೋಟದಲ್ಲಿ ಅಪರಿಚಿತರ ಓಡಾಟ ನಡೆಸಿದರೆ ಲೈನ್ ಆನ್ ಮೂಲಕ ಮಾಲೀಕರ ಮೊಬೈಲ್ ಗೆ ಸಂದೇಶ ಕಳುಹಿಸುವ ಸಿಸಿ ಕ್ಯಾಮರಾವನ್ನು ಅಳವಡಿಸಲಾಗಿದೆ. ಈ ಸಿಸಿಟಿವಿ ಕ್ಯಾಮರಾಕ್ಕೆ ಕನಿಷ್ಟ ಮೂವತ್ತು ದಿ‌ನ ವಿಡಿಯೋ ಸ್ಟೋರೇಜ್ ಮಾಡಿಕೊಳ್ಳುವ ವ್ಯವಸ್ಥೆ ಇದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

Published on: Jan 29, 2026 12:28 PM