ಕರೇಕಟ್ಟೆ ಗ್ರಾಮದಲ್ಲಿ ಜನ ನೋಡುತ್ತಿದ್ದಂತೆ ರಸ್ತೆಯಲ್ಲಿ ಮಲಗಿದ್ದ ಶ್ವಾನಗಳ ಮೇಲೆ ಕಾರ್ ಹಾಯಿಸಿಕೊಂಡು ಹೋದ ದುಷ್ಟ, ಒಂದು ಸಾವು

Edited By: ಸಾಧು ಶ್ರೀನಾಥ್​

Updated on: Aug 30, 2023 | 9:33 AM

ದಾವಣಗೆರೆ ಜಿಲ್ಲೆಯ ಕರೇಕಟ್ಟೆ ಗ್ರಾಮದ ಜಂಬಣ್ಣ ವೃತ್ತದ ಬಳಿ ನಿನ್ನೆ ರಾತ್ರಿ ಶ್ವಾನಗಳ ಮೇಲೆ ಅಪರಿಚಿತ ವಾಹನ ಓಡಿಸಿರುವ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ರಸ್ತೆಯಲ್ಲಿ ಮಲಗಿದ್ದ ಶ್ವಾನಗಳ ಮೇಲೆ ಕಾರ್ ಓಡಿಸಿಕೊಂಡು ಹೋಗಿದ್ದರಿಂದ ಒಂದು ಸಾವನ್ನಪ್ಪಿದೆ. ಅಮಾನವೀಯವಾಗಿ ವರ್ತಿಸಿ ಶ್ವಾನ ಸಾವಿಗೆ ಕಾರಣನಾದ ಕಾರ್ ಚಾಲಕನ ಪತ್ತೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ದಾವಣಗೆರೆ, ಆಗಸ್ಟ್​ 30: ರಾತ್ರಿ ವೇಳೆ ಗ್ರಾಮದಲ್ಲಿ ರಸ್ತೆಯಲ್ಲಿ ಮಲಗಿದ್ದ ನಾಯಿಗಳ  (Dog) ಮೇಲೆ ದುಷ್ಟನೊಬ್ಬ ಕಾರು ಹಾಯಿಸಿಕೊಂಡು ಹೋಗಿದ್ದಾನೆ. ಸದರಿ ಅಪರಿಚಿತ ಕಾರು (Car) ಮೂರು ಶ್ವಾನಗಳ‌ ಮೇಲೆ ಹಾಯ್ದುಹೋಗಿದೆ. ಒಂದು ಶ್ವಾನ ಸ್ಥಳದಲ್ಲಿಯೇ ಸಾವಿಗೀಡಾಗಿದೆ. ಇನ್ನೆರಡು ಶ್ವಾನಗಳಿಗೆ ಸ್ಥಳೀಯರಿಂದ ಚಿಕಿತ್ಸೆ ನೀಡಲಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕರೇಕಟ್ಟೆ ಗ್ರಾಮದ (Davangere Karekatte village) ಜಂಬಣ್ಣ ವೃತ್ತದ ಬಳಿ ನಿನ್ನೆ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ.

ಶ್ವಾನಗಳ ಮೇಲೆ ಅಪರಿಚಿತ ವಾಹನ ಓಡಿಸಿರುವ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ಅಮಾನವೀಯವಾಗಿ ವರ್ತಿಸಿ ಶ್ವಾನ ಸಾವಿಗೆ ಕಾರಣನಾದ ಕಾರ್ ಚಾಲಕನ ಪತ್ತೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More