SA vs IND 3rd T20I: ಕುಲ್ದೀಪ್ ಸ್ಪಿನ್ ತಂತ್ರಕ್ಕೆ ಮಿಲ್ಲರ್ ಕ್ಲೀನ್ ಬೌಲ್ಡ್: ವಿಡಿಯೋ ನೋಡಿ

|

Updated on: Dec 15, 2023 | 10:11 AM

Kuldeep yadav 5 Wickets Video: ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಮೂರನೇ ಟಿ20 ಪಂದ್ಯದಲ್ಲಿ ಮಾರಕ ಬೌಲಿಂಗ್ ಪ್ರದರ್ಶಿಸಿದ ಕುಲ್ದೀಪ್ ಯಾದವ್ ಕೇವಲ 2.5 ಓವರ್‌ ಬೌಲ್ ಮಾಡಿ 17 ರನ್ ನೀಡಿ 5 ವಿಕೆಟ್ ಪಡೆದರು. ಮುಖ್ಯವಾಗಿ ಕುಲ್ದೀಪ್ ಕೊನೆಯ ವಿಕೆಟ್ ಡೇವಿಡ್ ಮಿಲ್ಲರ್ ಅವರನ್ನು ಬೌಲ್ಡ್ ಮಾಡಿದ್ದು ವಿಶೇಷವಾಗಿತ್ತು.

ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ಟಿ20 ಸರಣಿ ಸಮಬಲದಲ್ಲಿ ಅಂತ್ಯಕಂಡಿದೆ. ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಅಂತಿಮ ಮೂರನೇ ಟಿ20 ಪಂದ್ಯದಲ್ಲಿ ಭಾರತ ಬರೋಬ್ಬರಿ 106 ರನ್​ಗಳ ಜಯ ಸಾಧಿಸಿ ಸರಣಿ 1-1 ಅಂತರದಿಂದ ಸಮಬಲ ಸಾಧಿಸಿತು. ಭಾರತ ಪರ ಕುಲ್ದೀಪ್ ಯಾದವ್ ಕೇವಲ 2.5 ಓವರ್‌ ಬೌಲ್ ಮಾಡಿ 17 ರನ್ ನೀಡಿ 5 ವಿಕೆಟ್ ಪಡೆದರು. ಇದರೊಂದಿಗೆ, ಅಂತಾರಾಷ್ಟ್ರೀಯ ಟಿ20 ಯಲ್ಲಿ 2 ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. ಮುಖ್ಯವಾಗಿ ಕುಲ್ದೀಪ್ ಕೊನೆಯ ವಿಕೆಟ್ ಡೇವಿಡ್ ಮಿಲ್ಲರ್ ಅವರನ್ನು ಬೌಲ್ಡ್ ಮಾಡಿದ್ದು ವಿಶೇಷವಾಗಿತ್ತು. ಸ್ವೀಪ್ ಹೊಡೆಯಬಹುದು ಎಂಬ ಮರ್ಮವನ್ನು ಅರಿತ ಕುಲ್ದೀಪ್, ಕ್ವಿಕ್ ಡೆಲಿವರಿಯಲ್ಲಿ ಮಿಲ್ಲರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಈ ವಿಕೆಟ್ ಕಬಳಿಸುವ ಮೂಲಕ ಭಾರತದ ಪರ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ ಐದು ವಿಕೆಟ್ ಗಳಿಸಿದ ಭುವನೇಶ್ವರ್ ಕುಮಾರ್ ಅವರ ದಾಖಲೆನ್ನು ಸರಿಗಟ್ಟಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ