ಕುಡಿದ ಅಮಲಿನಲ್ಲಿ ಕಾರ್ ರೂಫ್ ಮೇಲೆ ಹತ್ತಿ ಬಟ್ಟೆ ಕಳಚಿ ಯುವಕರ ಡ್ಯಾನ್ಸ್, ವಿಡಿಯೋ ವೈರಲ್
ನಾಲ್ವರು ಯುವಕರು ಎನ್ಹೆಚ್ 7 ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಹುಚ್ಚಾಟವಾಡಿದ್ದಾರೆ. ಯುವಕರು ಕುಡಿದ ಅಮಲಿನಲ್ಲಿ DL 3cba9775 ನಂಬರಿನ ಕಾರ್ ರೂಫ್ ಮೇಲೆ ಹತ್ತಿ ಬಟ್ಟೆ ಕಳಚಿ ಡ್ಯಾನ್ಸ್ ಮಾಡಿದ್ದಾರೆ.
ಬೆಂಗಳೂರು, ಡಿಸೆಂಬರ್ 15: ವಾಹನದಲ್ಲಿ ರಸ್ತೆ ಮೇಲೆ ಹೋಗುವಾಗ ಯುವಕರು ಹಚ್ಚಾಟವಾಡುವುದು ಮಿತಿಮೀರಿದೆ. ವ್ಹೀಲಿಂಗ್, ಯುವತಿಯರನ್ನ ಚುಡಾಯಿಸುವುದು ಮತ್ತು ಅಸಭ್ಯವಾಗಿ ವರ್ತಿಸುವುದು ಹೆಚ್ಚಾಗಿದೆ. ಪೊಲೀಸರು ಎಷ್ಟೇ ಕ್ರಮ ಕೈಗೊಂಡರು ಇವರಿಗೆ ಬುದ್ದಿ ಬರುತ್ತಿಲ್ಲ. ಇದೀಗ ಮತ್ತೆ ನಾಲ್ವರು ಯುವಕರು ಎನ್ಹೆಚ್ 7 ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಹುಚ್ಚಾಟವಾಡಿದ್ದಾರೆ. ಯುವಕರು ಕುಡಿದ ಅಮಲಿನಲ್ಲಿ DL 3cba9775 ನಂಬರಿನ ಕಾರ್ ರೂಫ್ ಮೇಲೆ ಹತ್ತಿ ಬಟ್ಟೆ ಕಳಚಿ ಡ್ಯಾನ್ಸ್ ಮಾಡಿದ್ದಾರೆ.
Latest Videos