ಕಾಟೇರ: ದರ್ಶನ್ ಕೈಯಲ್ಲಿರುವ ಮಚ್ಚಿನ ಗುಟ್ಟೇನು? ರಟ್ಟು ಮಾಡಿದ ಶ್ರುತಿ
Katera: ದರ್ಶನ್ ನಟನೆಯ ‘ಕಾಟೇರ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರುತಿ, ‘ಕಾಟೇರ’ ಪೋಸ್ಟರ್ನಲ್ಲಿ ಹೆಸರಿನ ನಡುವೆ ಮಚ್ಚು ಏಕಿದೆ ಎಂಬ ಬಗ್ಗೆ ಸೂಚ್ಯವಾಗಿ ಮಾತನಾಡಿದರು.
ದರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾದ ಸುದ್ದಿಗೋಷ್ಠಿ ಇಂದು (ಡಿಸೆಂಬರ್ 14) ಬೆಂಗಳೂರಿನಲ್ಲಿ ನಡೆಯಿತು. ಸುದ್ದಿಗೋಷ್ಠಿಯಲ್ಲಿ ನಟ ದರ್ಶನ್, ನಾಯಕಿ ರಾಧನಾ, ಹಿರಿಯ ನಟರಾದ ಅವಿನಾಶ್, ಶ್ರುತಿ, ಕುಮಾರ್ ಗೋವಿಂದು, ಬಿರಾದರ ಸೇರಿದಂತೆ ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸೇರಿದಂತೆ ಇನ್ನೂ ಹಲವರು ಹಾಜರಿದ್ದರು. ಈ ವೇಳೆ ಮಾತನಾಡಿದ ನಟಿ ಶ್ರುತಿ, ಕಾಟೇರ ಸಿನಿಮಾದ ಪೋಸ್ಟರ್ನಲ್ಲಿ ಇರುವ ಮಚ್ಚಿನ ಬಗ್ಗೆ ಮಾತನಾಡಿದರು. ಆ ಮಚ್ಚು ದರ್ಶನ್ ಕೈಯಲ್ಲಿ ಏಕಿದೆ? ‘ಕಾಟೇರ’ ಹೆಸರಿನಲ್ಲಿಯೂ ಮಚ್ಚಿನ ಚಿತ್ರವಿದ್ದು, ಅದು ಯಾಕಿದೆ ಎಂಬುದನ್ನು ಸೂಚ್ಯವಾಗಿ ಶ್ರುತಿ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 14, 2023 11:45 PM
Follow Us
Latest Videos
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್ ಆಪರೇಷನ್ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ

