ವಿಜಯಪುರ: ಟೈರ್ ಸ್ಫೋಟಕ್ಕೆ ಹೊತ್ತಿ ಉರಿದ ಖಾಸಗಿ ಬಸ್! ವಿಡಿಯೋ ಇಲ್ಲಿದೆ
ವಿಜಯಪುರ ತಾಲೂಕಿನ ಹಿಟ್ಟನಹಳ್ಳಿ ಬಳಿಯ ಎನ್ಎಚ್ 50 ರಲ್ಲಿ ಟೈರ್ ಸ್ಫೋಟಗೊಂಡು ಖಾಸಗಿ ಬಸ್ ಹೊತ್ತಿ ಉರಿದ ಘಟನೆ ನಡೆದಿದೆ. ಬೆಂಗಳೂರಿಂದ ವಿಜಯಪುರಕ್ಕೆ ಹೋಗುತ್ತಿದ್ದ ಬಸ್ ಇದಾಗಿದೆ. ಬಸ್ಗೆ ಬೆಂಕಿ ಹತ್ತುತಲೇ ಗಾಬರಿಗೊಂಡ ಪ್ರಯಾಣಿಕರು ಬಸ್ನಿಂದ ಇಳಿದಿದ್ದಾರೆ. ಆದರೆ ಲಗೇಜ್ಗಳು ಬೆಂಕಿಗಾಹುತಿಯಾಗಿವೆ.
ವಿಜಯಪುರ, ಡಿ.15: ಟೈರ್ ಸ್ಫೋಟದಿಂದ ಬೆಂಕಿ ತಗುಲಿ (Fire Accident) ಖಾಸಗಿ ಬಸ್ ಹೊತ್ತಿ ಉರಿದ ಘಟನೆ ವಿಜಯಪುರ (Vijayapura) ತಾಲೂಕಿನ ಹಿಟ್ಟನಹಳ್ಳಿ ಬಳಿಯ ಎನ್ಎಚ್ 50 ರಲ್ಲಿ ನಡೆದಿದೆ. ಬೆಂಗಳೂರಿಂದ ವಿಜಯಪುರಕ್ಕೆ ಹೋಗುತ್ತಿದ್ದಾಗ ಜನತಾ ಟ್ರಾವೆಲ್ಸ್ ಬಸ್ನ ಟೈರ್ ಸ್ಫೋಟಗೊಂಡಿದೆ. ಈ ವೇಳೆ ಜನರೆಲ್ಲರೂ ಬಸ್ನಿಂದ ಕೆಳಗಿಳಿದಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಬಸ್ಗೆ ಬೆಂಕಿ ಹತ್ತಿಕೊಂಡು ಇಡೀ ಬಸ್ಗೆ ವ್ಯಾಪಿಸಿ ಧಗಧಗಿಸಿದೆ. ಘಟನೆಯಲ್ಲಿ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಪ್ರಯಾಣಿಕರ ಲಗೇಜ್ಗಳು, ಬೆಳೆ ಬಾಳುವ ವಸ್ತುಗಳು, ಬಟ್ಟೆಗಳು, ನಗದು ಒಡವೆಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಹಾಗೂ ಅಗ್ನಿ ಶಾಮಕದಳ ದೌಡಾಯಿಸಿದ್ದು, ಬೆಂಕಿ ನಂದಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos