ತೆಲಂಗಾಣ: ಅಯ್ಯಪ್ಪ ಶಾಪಿಂಗ್ ಮಾಲ್‌ನಲ್ಲಿ ಅಗ್ನಿ ಅವಘಡ
ತೆಲಂಗಾಣದ ಕಾಮರೆಡ್ಡಿ ಜಿಲ್ಲಾ ಕೇಂದ್ರದಲ್ಲಿರುವ ಅಯ್ಯಪ್ಪ ಶಾಪಿಂಗ್ ಮಾಲ್ ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಬುಧವಾರ ರಾತ್ರಿ 11.30ರ ವೇಳೆಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಶಾಪಿಂಗ್ ಮಾಲ್‌ನ ನಾಲ್ಕು ಮಹಡಿಗಳಿಗೆ ಬೆಂಕಿ ಕ್ರಮೇಣ ವ್ಯಾಪಿಸಿತು. ಈ ಅವಘಡದಲ್ಲಿ ಶಾಪಿಂಗ್ ಮಾಲ್‌ನಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ. ಸ್ಥಳೀಯರ ಮಾಹಿತಿ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.
ತೆಲಂಗಾಣದ ಕಾಮರೆಡ್ಡಿ ಜಿಲ್ಲಾ ಕೇಂದ್ರದಲ್ಲಿರುವ ಅಯ್ಯಪ್ಪ ಶಾಪಿಂಗ್ ಮಾಲ್ ನಲ್ಲಿ ಭಾರೀ ಅಗ್ನಿ ಅವಘಡ(Fire Accident) ಸಂಭವಿಸಿದೆ. ಬುಧವಾರ ರಾತ್ರಿ 11.30ರ ವೇಳೆಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಶಾಪಿಂಗ್ ಮಾಲ್‌ನ ನಾಲ್ಕು ಮಹಡಿಗಳಿಗೆ ಬೆಂಕಿ ಕ್ರಮೇಣ ವ್ಯಾಪಿಸಿತು. ಈ ಅವಘಡದಲ್ಲಿ ಶಾಪಿಂಗ್ ಮಾಲ್‌ನಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ. ಸ್ಥಳೀಯರ ಮಾಹಿತಿ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.
ಬೆಳಗ್ಗೆ 7 ಗಂಟೆ ವೇಳೆಗೆ ಎರಡು ಮಹಡಿಗಳಲ್ಲಿ ಬೆಂಕಿಯನ್ನು ಹತೋಟಿಗೆ ತರಲಾಯಿತು. ಆದರೆ ಇನ್ನೆರಡು ಮಹಡಿಗಳಲ್ಲಿ ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಇದರಿಂದ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ.
VIDEO | Fire breaks out in Ayyappa Shopping Mall, Kamareddy in Telangana. Fire tenders on the spot. More details are awaited. pic.twitter.com/al11aF0Ng4
— Press Trust of India (@PTI_News) December 14, 2023
ಈ ಅವಘಡದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾನಿ ಸಂಭವಿಸಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಆದರೆ, ಈ ಬೆಂಕಿ ಹೇಗೆ ಸಂಭವಿಸಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಶಾಪಿಂಗ್ ಮಾಲ್‌ನಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ