6 ವರ್ಷಗಳ ಬಳಿಕ ಶತಕ ಬಾರಿಸಿದ ಡೇವಿಡ್ ವಾರ್ನರ್… ಆದರೆ
ಹೊಬಾರ್ಟ್ ತಂಡದ ಈ ಗೆಲುವಿನೊಂದಿಗೆ ಡೇವಿಡ್ ವಾರ್ನರ್ 6 ವರ್ಷಗಳ ಬಳಿಕ ಬಾರಿಸಿದ ಶತಕ ವ್ಯರ್ಥವಾಗಿದೆ. ಇದಕ್ಕೂ ಮುನ್ನ ಡೇವಿಡ್ ವಾರ್ನರ್ ಟಿ20 ಸೆಂಚುರಿ ಸಿಡಿಸಿದ್ದು 2019 ರಲ್ಲಿ. ಅದು ಕೂಡ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ. ಇದೀಗ ಬರೋಬ್ಬರಿ ಆರು ವರ್ಷಗಳ ಬಳಿಕ ಬಿಗ್ ಬ್ಯಾಷ್ ಲೀಗ್ನಲ್ಲಿ ಸೆಂಚುರಿ ಸಿಡಿಸಿ ಗಮನ ಸೆಳೆದಿದ್ದಾರೆ.
ಬರೋಬ್ಬರಿ 6 ವರ್ಷಗಳ ಬಳಿಕ ಡೇವಿಡ್ ವಾರ್ನರ್ ಬ್ಯಾಟ್ನಿಂದ ಟಿ20 ಶತಕ ಮೂಡಿಬಂದಿದೆ. ಈ ಶತಕದ ಹೊರತಾಗಿಯೂ ಸಿಡ್ನಿ ಥಂಡರ್ ತಂಡವು ಪಂದ್ಯವನ್ನು ಸೋತಿದೆ. ಸಿಡ್ನಿ ಶೋಗ್ರೌಂಡ್ ಸ್ಟೇಡಿಯಂನಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್ನ 21ನೇ ಪಂದ್ಯದಲ್ಲಿ ಹೊಬಾರ್ಟ್ ಹರಿಕೇನ್ಸ್ ಹಾಗೂ ಸಿಡ್ನಿ ಥಂಡರ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಹೊಬಾರ್ಟ್ ತಂಡದ ನಾಯಕ ನಾಥನ್ ಎಲ್ಲಿಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಡ್ನಿ ಪರ ಡೇವಿಡ್ ವಾರ್ನರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೂ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ವಾರ್ನರ್ 65 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಅಜೇಯ 130 ರನ್ ಬಾರಿಸಿದರು.
ಈ ಶತಕದ ನೆರವಿನೊಂದಿಗೆ ಸಿಡ್ನಿ ಥಂಡರ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 205 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಹೊಬಾರ್ಟ್ ಹರಿಕೇನ್ಸ್ ಪರ ಆರಂಭಿಕ ದಾಂಡಿಗ ಟಿಮ್ ವಾರ್ಡ್ 49 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ 90 ರನ್ ಬಾರಿಸಿದರು.
ಈ ಮೂಲಕ 17.5 ಓವರ್ಗಳಲ್ಲಿ 207 ರನ್ಗಳಿಸುವ ಮೂಲಕ ಹೊಬಾರ್ಟ್ ಹರಿಕೇನ್ಸ್ ತಂಡವು 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಹೊಬಾರ್ಟ್ ತಂಡದ ಈ ಗೆಲುವಿನೊಂದಿಗೆ ಡೇವಿಡ್ ವಾರ್ನರ್ 6 ವರ್ಷಗಳ ಬಳಿಕ ಬಾರಿಸಿದ ಶತಕ ವ್ಯರ್ಥವಾಗಿದೆ. ಇದಕ್ಕೂ ಮುನ್ನ ಡೇವಿಡ್ ವಾರ್ನರ್ ಟಿ20 ಸೆಂಚುರಿ ಸಿಡಿಸಿದ್ದು 2019 ರಲ್ಲಿ. ಅದು ಕೂಡ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ. ಇದೀಗ ಬರೋಬ್ಬರಿ ಆರು ವರ್ಷಗಳ ಬಳಿಕ ಬಿಗ್ ಬ್ಯಾಷ್ ಲೀಗ್ನಲ್ಲಿ ಸೆಂಚುರಿ ಸಿಡಿಸಿ ಗಮನ ಸೆಳೆದಿದ್ದಾರೆ.

