Mysuru: ಚುನಾವಣಾ ರಾಜಕೀಯಕ್ಕೆ ರಾಮದಾಸ್ ನಿವೃತ್ತಿ: ಕಾರಣ ಬಿಚ್ಚಿಟ್ಟ ಮಾಜಿ ಸಚಿವ
ಚುನಾವಣಾ ರಾಜಕಾರಣದಿಂದ ದೂರ ಉಳಿಯೋದಾಗಿ ಮೈಸೂರಲ್ಲಿ ಮಾಜಿ ಸಚಿವ ಎಸ್. ಎ. ರಾಮದಾಸ್ ಘೋಷಿಸಿದ್ದಾರೆ. 30 ವರ್ಷ ರಾಜಕೀಯ ಮಾಡಿದ್ದೇನೆ. ಎಲ್ಲೂ ಕೈಯನ್ನು ಅಶುದ್ಧ ಮಾಡಿಕೊಂಡಿಲ್ಲ. ಈ ಹಿಂದೆ ರಾಮನಿಗೆ ಪಟ್ಟಾಭಿಷೇಕ ಆಗಬೇಕಿತ್ತು. ಆದರೆ ದಶರಥನ ಮೂಲಕ ರಾಮನನ್ನು ಕಾಡಿಗೆ ಕಳುಹಿಸಬೇಕಾಯಿತು. ಶ್ರೀರಾಮನೇ ಮರು ಮಾತನಾಡದೆ ಕಾಡಿಗೆ ಹೋದ. ಇನ್ನು ನಾನು ರಾಮದಾಸ, ನಾನೇನು ಮಾಡಲಿ? ಎಂದು ಪ್ರಶ್ನಿಸಿದ್ದಾರೆ.
ಮೈಸೂರು, ಜನವರಿ 04: ಚುನಾವಣಾ ರಾಜಕೀಯಕ್ಕೆ ಬಿಜೆಪಿ ನಾಯಕ, ಮಾಜಿ ಸಚಿವ ಎಸ್. ಎ. ರಾಮದಾಸ್ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಅವರು, ಎಲ್ಲರೂ ನನ್ನನ್ನು ಸಕ್ರಿಯ ರಾಜಕೀಯದಲ್ಲಿ ಇರಿ ಅಂತಾರೆ. ಆದರೆ ನನಗೆ ಚುನಾವಣೆ ರಾಜಕಾರಣ ಸಾಕಾಗಿದೆ. ಈ ಹಿಂದೆ ರಾಮನಿಗೆ ಪಟ್ಟಾಭಿಷೇಕ ಆಗಬೇಕಿತ್ತು. ಆದರೆ ದಶರಥನ ಮೂಲಕ ರಾಮನನ್ನು ಕಾಡಿಗೆ ಕಳುಹಿಸಬೇಕಾಯಿತು. ಶ್ರೀರಾಮನೇ ಮರು ಮಾತನಾಡದೆ ಕಾಡಿಗೆ ಹೋದ. ಇನ್ನು ನಾನು ರಾಮದಾಸ, ನಾನೇನು ಮಾಡಲಿ? ಎಂದು ಹೇಳುವ ಮೂಲಕ ಟಿಕೆಟ್ ಕೈತಪ್ಪಿದ್ದನ್ನು ಮಾಜಿ ಸಚಿವರು ನೆನಪಿಸಿಕೊಂಡರು. ಊಟಕ್ಕೆ ಕೂತ ನನ್ನನು ಅರ್ಧದಿಂದ ಎಬ್ಬಿಸಿ, ಬೇರೆಯವರನ್ನು ಕೂರಿಸಿದರು. ನಾನೇ ಊಟ ಬಡಿಸಿದ್ದು, ನನಗೇನೂ ದುಃಖವಿಲ್ಲ. ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನ್ನು, 30 ವರ್ಷ ರಾಜಕೀಯ ಮಾಡಿದ್ದೇನೆ. ಎಲ್ಲೂ ಕೈಯನ್ನು ಅಶುದ್ಧ ಮಾಡಿಕೊಂಡಿಲ್ಲ. ಬಿಜೆಪಿ ನನಗೆ ತಾಯಿ ಇದ್ದಂತೆ, ಯಾವುದೇ ಕಾರಣಕ್ಕೂ ಪಕ್ಷಕ್ಕೆ ದ್ರೋಹ ಮಾಡಲ್ಲ ಎಂದೂ ರಾಮದಾಸ್ ಇದೇ ವೇಳೆ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
