Video: ಥಾರ್ನಲ್ಲಿ ಬಂದು ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು
ಥಾರ್ನಲ್ಲಿ ಬಂದ ದುಷ್ಕರ್ಮಿಗಳು ಕಾರಿನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಗಾಜಿಯಾಬಾದ್ನ ನಂದಗ್ರಾಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಲೆನೊ ಕಾರಿಗೆ ಮೂರು ಗುಂಡುಗಳು ತಗುಲಿವೆ. ಸಿಕ್ರೋಡ್ ನಿವಾಸಿ ಸುನಿಲ್ ಕುಮಾರ್, ಮುಖ್ಯ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದಾರೆ. ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ, ಅವರ ಮಗ ಶುಭಮ್ ಮನೆಯ ಬಳಿ ನಿಂತಿದ್ದರು, ಅವರ ಇನ್ನೊಬ್ಬ ಮಗ ಹರ್ಷ್ ತನ್ನ ಸ್ನೇಹಿತ ಅಂಕುರ್ ಜೊತೆ ಬಲೆನೊ ಕಾರಿನಲ್ಲಿದ್ದರು. ಮೀರತ್ ರಸ್ತೆಯಿಂದ ಬರುತ್ತಿದ್ದ ಕಪ್ಪು ಬಣ್ಣದ ಥಾರ್, ಬಲೆನೊ ಕಾರನ್ನು ಸಮೀಪಿಸುತ್ತಿದ್ದಂತೆ ಕಾರಿನಲ್ಲಿದ್ದ ದುಷ್ಕರ್ಮಿಗಳು ಮೂರು ಗುಂಡುಗಳನ್ನು ಹಾರಿಸಿದ್ದರು.
ಗಾಜಿಯಾಬಾದ್, ಜನವರಿ 04: ಥಾರ್ನಲ್ಲಿ ಬಂದ ದುಷ್ಕರ್ಮಿಗಳು ಕಾರಿನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಗಾಜಿಯಾಬಾದ್ನ ನಂದಗ್ರಾಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಲೆನೊ ಕಾರಿಗೆ ಮೂರು ಗುಂಡುಗಳು ತಗುಲಿವೆ. ಸಿಕ್ರೋಡ್ ನಿವಾಸಿ ಸುನಿಲ್ ಕುಮಾರ್, ಮುಖ್ಯ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದಾರೆ. ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ, ಅವರ ಮಗ ಶುಭಮ್ ಮನೆಯ ಬಳಿ ನಿಂತಿದ್ದರು, ಅವರ ಇನ್ನೊಬ್ಬ ಮಗ ಹರ್ಷ್ ತನ್ನ ಸ್ನೇಹಿತ ಅಂಕುರ್ ಜೊತೆ ಬಲೆನೊ ಕಾರಿನಲ್ಲಿದ್ದರು. ಮೀರತ್ ರಸ್ತೆಯಿಂದ ಬರುತ್ತಿದ್ದ ಕಪ್ಪು ಬಣ್ಣದ ಥಾರ್, ಬಲೆನೊ ಕಾರನ್ನು ಸಮೀಪಿಸುತ್ತಿದ್ದಂತೆ ಕಾರಿನಲ್ಲಿದ್ದ ದುಷ್ಕರ್ಮಿಗಳು ಮೂರು ಗುಂಡುಗಳನ್ನು ಹಾರಿಸಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

