AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಬ್ಬಾಳದಲ್ಲಿ ಮೇಲ್ಸೇತುವೆ ಕಾಮಗಾರಿಯನ್ನು ವಿನೂತನ ಶೈಲಿಯಲ್ಲಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್

ಹೆಬ್ಬಾಳದಲ್ಲಿ ಮೇಲ್ಸೇತುವೆ ಕಾಮಗಾರಿಯನ್ನು ವಿನೂತನ ಶೈಲಿಯಲ್ಲಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Aug 05, 2025 | 1:09 PM

Share

ಶಿವಕುಮಾರ್ ಈ ಭಾಗದಿಂದ ಆ ಭಾಗಕ್ಕೆ ಹೋಗೋದೇನೋ ಒಬ್ಬರೇ ಹೋಗುತ್ತಾರೆ, ಆದರೆ ಬರುವಾಗ ತಮ್ಮ ಹಿಂದೆ ಪಿಲಿಯನ್ ರೈಡರ್ ಆಗಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ರನ್ನು ಕೂರಿಸಿಕೊಂಡು ಬರುತ್ತಾರೆ. ಸುರೇಶ್ ಸ್ಥಳೀಯ ಶಾಸಕ. ಗಣ್ಯರಿಬ್ಬರು ವಾಪಸ್ಸು ಬರುವಾಗಲೂ ಜನ ಜಿದ್ದಿಗೆ ಬಿದ್ದವರಂತೆ ಉಸೇನ್ ಬೋಲ್ಟ್​ನನ್ನು ಮೀರಿಸುವ ಹಾಗೆ ದ್ವಿಚಕ್ರವಾಹನದ ಹಿಂದೆ ಓಡುತ್ತಾರೆ!

ಬೆಂಗಳೂರು, ಆಗಸ್ಟ್ 5: ಹೆಬ್ಬಾಳದಲ್ಲಿ ಮೇಲ್ಸೇತುವೆ ಕಾಮಗಾರಿ (Hebbal Flyover Works) ನಡೆಯುತ್ತಿರುವುದು ಬೆಂಗಳೂರಿನ ನಿವಾಸಿಗಳಿಗೆಲ್ಲ ಗೊತ್ತಿರುವ ಸಂಗತಿ. ಆದರೆ ಕಾಮಗಾರಿ ವೀಕ್ಷಿಸುವುದು ಇದ್ಯಾವ ವಿಧಾನ ಮಾರಾಯ್ರೇ? ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ವತ್ತು ಹೆಬ್ಬಾಳ ಮೇಲ್ಸೇತುವೆ ಕಾಮಗಾರಿಯನ್ನು ಹೀಗೆ ವೀಕ್ಷಿಸಿದರು. ಹೆಲ್ಮೆಟ್ ಧಾರಿಯಾಗಿ ಸ್ಕೂಟರೊಂದನ್ನು ಹತ್ತಿ ಅವರು ಕಾಮಗಾರಿ ನಡೆಯುತ್ತಿರುವ ಸೇತುವೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋದರು. ಅವರೇನೋ ವಾಹನ ಹತ್ತಿ ಹೊರಟರು, ಅದರೆ ಭದ್ರತಾ ಸಿಬ್ಬಂದಿ, ಪೊಲೀಸ್ ಮತ್ತು ಕೆಮೆರಾಮನ್​ಗಳ ಅವಸ್ಥೆ ನೋಡಿ! ಡಿಸಿಎಂ ವಾಹನದ ಹಿಂದೆ ಬಿದ್ನೋ ಸತ್ನೋ ಅಂತ ಓಡುತ್ತಿದ್ದಾರೆ. ಗಾತ್ರದಲ್ಲಿ ಧಡೂತಿ ಅನಿಸುವ ಪೊಲೀಸರು ಸ್ವಲ್ಪಮಾತ್ರ ಓಡಿ ಏದುಸಿರು ಬಿಡುತ್ತಾ ನಿಂತುಬಿಡುತ್ತಾರೆ.

ಇದನ್ನೂ ಓದಿ:   Karnataka Transport Strike; ಸಾರ್ವಜನಿಕ ಸೇವೆಯಲ್ಲಿರುವವರು ಜನರಿಗೆ ತೊಂದರೆಯಾಗದಂತೆ ವರ್ತಿಸಬೇಕು: ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.