ಪ್ರಧಾನ ಮಂತ್ರಿಯವರನ್ನು ಸ್ವಾಗತಿಸಲು ಹೋಗದಿರದ ಕಾರಣವನ್ನು ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ವಿವರಿಸಿದರು

|

Updated on: Aug 26, 2023 | 2:36 PM

ರಾಜ್ಯಪಾಲರು, ಮುಖ್ಯಮಂತ್ರಿ, ಶಿವಕುಮಾರ್ ಹಾಗೂ ಇನ್ನಿತರ ಸಚಿವರರು ಹೆಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ಹೋಗುವುದು ತೀರ್ಮಾನವಾಗಿತ್ತು. ಆದರೆ, ಪ್ರಧಾನ ಮಂತ್ರಿಗಳ ಕಚೇರಿಯಿಂದ ಯಾರೂ ಬರೋದು ಬೇಡ ಅಂತ ಸಂದೇಶ ಬಂದಾಗ, ಅದನ್ನು ಲಿಖಿತ ರೂಪದಲ್ಲಿ ನೀಡಲು ರಾಜ್ಯಸರ್ಕಾರ ಕೋರಿದ ಬಳಿಕ ಅಲ್ಲಿಂದ ಪತ್ರವೂ ಬಂದಿದೆ ಮತ್ತು ಅದರ ಸ್ಕ್ರೀನ್ ಶಾಟ್ ತಮ್ಮ ಮೊಬೈಲ್ ನಲ್ಲಿದೆ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ( PM Narendra Modi) ಇಂದು ಬೆಂಗಳೂರಿಗೆ ಆಗಮಿಸಿದಾಗ ಅವರನ್ನು ಸ್ವಾಗತಿಸಲು ರಾಜ್ಯಪಾಲರಾಗಲಿ (governor), ಮುಖ್ಯಮಂತ್ರಿಯಾಗಲೀ ಮತ್ತು ತಾವಾಗಲೀ ಯಾಕೆ ವಿಮಾನ ನಿಲ್ದಾಣಕ್ಕೆ ಹೋಗಲಿಲ್ಲ ಅನ್ನೋದನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿವರಿಸಿ (DK Shivakumar) ಹೇಳಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಆರ್ ಅಶೋಕ ಹೇಳುತ್ತಿರುವಂತೆ ನಮಗೆ ಶಿಷ್ಟಾಚಾರ ಗೊತ್ತಿಲ್ಲ ಅಂತಿಲ್ಲ, ಆದರಣೀಯ ಪ್ರಧಾನಮಂತ್ರಿಗಳ ಬಗ್ಗೆ ತಮ್ಮ ಸರ್ಕಾರಕ್ಕೆ ಗೌರವಾದರಗಳಿವೆ ಎಂದು ಹೇಳಿದರು. ರಾಜ್ಯಪಾಲರು, ಮುಖ್ಯಮಂತ್ರಿ, ಶಿವಕುಮಾರ್ ಹಾಗೂ ಇನ್ನಿತರ ಸಚಿವರರು ಹೆಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ಹೋಗುವುದು ತೀರ್ಮಾನವಾಗಿತ್ತು. ಆದರೆ, ಪ್ರಧಾನ ಮಂತ್ರಿಗಳ ಕಚೇರಿಯಿಂದ ಯಾರೂ ಬರೋದು ಬೇಡ ಅಂತ ಸಂದೇಶ ಬಂದಾಗ, ಅದನ್ನು ಲಿಖಿತ ರೂಪದಲ್ಲಿ ನೀಡಲು ರಾಜ್ಯಸರ್ಕಾರ ಕೋರಿದ ಬಳಿಕ ಅಲ್ಲಿಂದ ಪತ್ರವೂ ಬಂದಿದೆ ಮತ್ತು ಅದರ ಸ್ಕ್ರೀನ್ ಶಾಟ್ ತಮ್ಮ ಮೊಬೈಲ್ ನಲ್ಲಿದೆ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ