ದೆಹಲಿಯಲ್ಲೇ ಉಳಿದು ಜಲಸಂಪನ್ಮೂಲ ಅಧಿಕಾರಿಗಳೊದಿಗೆ ಸಭೆ ನಡೆಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

|

Updated on: Aug 03, 2023 | 12:26 PM

ಸಿದ್ದರಾಮಯ್ಯ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದರೆ, ಶಿವಕುಮಾರ್ ಜಲಸಂಪನ್ಮೂಲ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ.

ದೆಹಲಿ: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ದೆಹಲಿಗೆ ಭೇಟಿ ನೀಡಿದಾಗೆಲ್ಲ ಬಹಳ ಬ್ಯೂಸಿಯಾಗಿರುತ್ತಾರೆ ಅನ್ನೋದು ನಿರ್ವಿವಾದಿತ. ಪ್ರವಾಸದ ಪ್ರತಿನಿಮಿಷವನ್ನು ಪ್ರಯೋಜನಪಡಿಸಿಕೊಳ್ಳುವ ತವಕದಲ್ಲಿದ್ದಾರೆ. ನಿನ್ನೆ ಪಕ್ಷದ ಹೈಕಮಾಂಡ್ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸಿದ ಬಳಿಕ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅಲ್ಲೇ ಉಳಿದಿದ್ದಾರೆ. ಸಿದ್ದರಾಮಯ್ಯ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು (PM Narendra Modi) ಭೇಟಿಯಾಗಲಿದ್ದಾರೆ. ಅತ್ತ ಶಿವಕುಮಾರ್ ರಾಜ್ಯದ ಜಲಸಂಪನ್ಮೂಲ ಅಧಿಕಾರಿಗಳೊಂದಿಗೆ ಕೇಂದ್ರ ಜಲಸಂಪನ್ಮೂಲ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ನೀರಿಗೆ ಸಂಬಂಧಿಸಿದಂತೆ ನೆರೆರಾಜ್ಯಗಳೊಂದಿಗೆ ಕರ್ನಾಟಕದ ಹಲವು ತಗಾದೆಗಳಿವೆ. ಅವುಗಳನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳುವ ಪ್ರಯತ್ನ ಶಿವಕುಮಾರ್ ಮಾಡುತ್ತಿದ್ದಾರೆ. ಅವರೊಂದಿಗೆ ಜಲಸಮಸ್ಯೆಗಳಿಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಹಿರಿಯ ವಕೀಲ ಮೋಹನ್ ಕಾತರಕಿ, ಅಧಿಕಾರಿಗಳಾದ ತುಷಾರ ಗಿರಿನಾಥ್, ರಾಕೇಶ್ ಸಿಂಗ್ ಮೊದಲಾದವರಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ