ತಮಿಳುನಾಡುಗೆ ಕಾವೇರಿ ನೀರು; ಲೀಗಲ್ ಟೀಮನ್ನು ಭೇಟಿಯಾಗಲು ನಾಳೆ ಡಿಕೆ ಶಿವಕುಮಾರ್ ದೆಹಲಿಗೆ ಪಯಣ
ರಾಜ್ಯದ ಜಲಾಶಯಗಳ ಬೀಗದ ಕೈಗಳು ತಮ್ಮ ಕೈಯಲ್ಲಿದೆ, ಅವು ಬೇರೆಯವರ ಕೈ ಸೇರದಂತೆ ರಾಜ್ಯ ಸರ್ಕಾರ ಎಚ್ಚರವಹಿಸಬೇಕಿದೆ ಎಂದು ಶಿವಕುಮಾರ್ ಹೇಳಿದರು. ಕಾವೇರಿ ನೀರಿಗೆ ಸಂಬಂಧಿಸಿದ ಗಂಭೀರ ಮತ್ತು ಸೂಕ್ಷ್ಮ ವಿಷಯದಲ್ಲೂ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ರಾಜಕಾರಣ ಮಾಡುತ್ತಿದ್ದಾರೆ, ಯಾರು ಏನು ಬೇಕಾದರೂ ಟೀಕೆ ಮಾಡಲಿ, ರಾಜ್ಯ ರೈತರ ಹಿತ ಕಾಯುವುದು ತಮ್ಮ ಆದ್ಯತೆಯಾಗಿದೆ ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮೈಸೂರಲ್ಲಿ ಇಂದು ನಡೆಯುತ್ತಿರುವ ಗೃಹ ಲಕ್ಷ್ಮಿ ಕಾರ್ಯಕ್ರಮದ (Gruha Lakshmi ) ಭಾಗವಾಗಲು ತೆರಳುವ ಮೊದಲು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿ ನಾಳೆ ದೆಹಲಿಗೆ ಹೋಗುತ್ತಿರುವ ವಿಷಯವನ್ನು ತಿಳಿಸಿದರು. ಹದಿನೈದು ದಿನಗಳವರೆಗೆ ತಮಿಳುನಾಡುಗೆ 5,000 ಟಿಎಂಸಿ ಕಾವೇರಿ ನದಿ ನೀರನ್ನು ಬಿಡುವಂತೆ ಸುಪ್ರೀಮ್ ಕೋರ್ಟ್ ಆದೇಶಿಸಿದೆ. ಶುಕ್ರವಾರ ನ್ಯಾಯಾಲಯದಲ್ಲಿ ಕರ್ನಾಟಕದ ಪರ ವಕೀಲರು ವಾದ ಮಂಡಿಸಲಿದ್ದು ಅವರನ್ನು ತಮ್ಮ ಟೀಮಿನೊಂದಿಗೆ ಭೇಟಿಯಾಗಬೇಕಿದೆ. ವಕೀಲರಿಗೆ ವಸ್ತುಸ್ಥಿತಿಯನ್ನು ವಿವರಿಸಬೇಕಿದೆ. ರಾಜ್ಯದ ಜಲಾಶಯಗಳ ಬೀಗದ ಕೈಗಳು ತಮ್ಮ ಕೈಯಲ್ಲಿದೆ, ಅವು ಬೇರೆಯವರ ಕೈ ಸೇರದಂತೆ ರಾಜ್ಯ ಸರ್ಕಾರ ಎಚ್ಚರವಹಿಸಬೇಕಿದೆ ಎಂದು ಶಿವಕುಮಾರ್ ಹೇಳಿದರು. ಕಾವೇರಿ ನೀರಿಗೆ ಸಂಬಂಧಿಸಿದ ಗಂಭೀರ ಮತ್ತು ಸೂಕ್ಷ್ಮ ವಿಷಯದಲ್ಲೂ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ರಾಜಕಾರಣ ಮಾಡುತ್ತಿದ್ದಾರೆ, ಯಾರು ಏನು ಬೇಕಾದರೂ ಟೀಕೆ ಮಾಡಲಿ, ರಾಜ್ಯ ರೈತರ ಹಿತ ಕಾಯುವುದು ತಮ್ಮ ಆದ್ಯತೆಯಾಗಿದೆ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ