ಗೃಹಲಕ್ಷ್ಮಿ ಹಣ ಬರಬೇಕು ಅಂದ್ರೆ ಕಾರ್ಯಕ್ರಮಕ್ಕೆ ಮನೆ ಯಜಮಾನ ಬರಲೇಬೇಕಂತೆ! ಸಿಡಿದೆದ್ದ ಗಂಡಸರು
ರಾಯಚೂರು ನಗರದಲ್ಲಿಯೂ ಗೃಹಲಕ್ಷ್ಮಿ ಯೋಜನೆಗೆ ಚಾಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದರೆ ಹಣ ಬರಬೇಕು ಅಂದ್ರೆ ನಗರದಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಮನೆ ಯಜಮಾನರೂ ಬರಲೇಬೇಕು ಎಂಬ ಷರತ್ತು ಹಾಕಲಾಗಿದೆ. ಬಾರದಿದ್ದರೆ ಅಕೌಂಟ್‌ಗೆ 2 ಸಾವಿರ ರೂಪಾಯಿ ಬರುವುದಿಲ್ಲ ಎನ್ನಲಾಗಿದೆ. ಇದರಿಂದ ಮನೆ ಯಜಮಾನಿಯರ ಪತಿಯಂದಿರು ಆಕ್ರೋಶಗೊಂಡಿದ್ದಾರೆ.
ರಾಯಚೂರು, ಆಗಸ್ಟ್ 30: ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ (Gruha lakshmi scheme) ರಾಜ್ಯಾದ್ಯಂತ ಇಂದು ಅದ್ದೂರಿ ಚಾಲನೆ (inauguration) ನೀಡಲಾಗಿದೆ. ಮೈಸೂರಿನಲ್ಲಿ ಪ್ರಧಾನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾಂಗ್ರೆಸ್ ನಾಯಕ ರಾಹುಲಕ್ ಗಾಂಧಿ ಸಹ ಆಗಮಿಸಿದ್ದಾರೆ. ರಾಯಚೂರು ನಗರದಲ್ಲಿಯೂ ಗೃಹಲಕ್ಷ್ಮಿ ಯೋಜನೆಗೆ ಚಾಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದರೆ ಹಣ (Money) ಬರಬೇಕು ಅಂದ್ರೆ ನಗರದಲ್ಲಿ (Raichur) ಆಯೋಜಿಸಿರುವ ಕಾರ್ಯಕ್ರಮಕ್ಕೆ ಮನೆ ಯಜಮಾನರೂ ಬರಲೇಬೇಕು ಎಂಬ ಷರತ್ತು ಹಾಕಲಾಗಿದೆ. ಬಾರದಿದ್ದರೆ ಅಕೌಂಟ್‌ಗೆ 2 ಸಾವಿರ ರೂಪಾಯಿ ಬರುವುದಿಲ್ಲ ಎನ್ನಲಾಗಿದೆ. ಇದರಿಂದ ಮನೆ ಯಜಮಾನಿಯರ ಪತಿಯಂದಿರು ಆಕ್ರೋಶಗೊಂಡಿದ್ದಾರೆ.
ಹೀಗಂತ ಒತ್ತಾಯಪೂರ್ವಕವಾಗಿ ಕಾರ್ಯಕ್ರಮಕ್ಕೆ ಪತಿ-ಪತ್ನಿಯರನ್ನ ಕರೆತಂದಿರುವುದು ಕಂಡುಬಂದಿದೆ. ಇದರಿಂದ ನಗರದ ಕನ್ನಡ ಭವನದಲ್ಲಿ ಆಯೋಜಿಸಿರುವ ಕಾರ್ಯಕ್ರಮ ಸ್ಥಳದಲ್ಲಿ ಕಿರಿಕ್ ಶುರುವಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಫಲಾನುಭವಿಗಳನ್ನ ಕಾರ್ಯಕ್ರಮಕ್ಕೆ ಕರೆತಂದಿರುವ ಆರೋಪ ಕೇಳಿಬಂದಿದೆ.
Also Read: Gruha Lakshmi Launch Live: ಮೈಸೂರಿಗೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಅರ್ಜಿ ನೋಂದಣಿಗೆ ನೀಡಿರುವ ಮೊಬೈಲ್ ಸಹಿತ ಕಾರ್ಯಕ್ರಮಕ್ಕೆ ಬರಲು ಸೂಚನೆ ನೀಡಲಾಗಿದೆಯಂತೆ. ತಾವು ಮಾಡುತ್ತಿದ್ದ ಕೆಲಸ, ದುಡಿಮೆಯನ್ನ ಬಿಟ್ಟು ಪತ್ನಿಯರೊಂದಿಗೆ ಬಂದಿರುವುದಾಗಿ ಪತಿಯಂದಿರುವ ಆರೋಪ ಮಾಡಿದ್ದಾರೆ. ಅಕೌಂಟ್‌ಗೆ ದುಡ್ಡು ಹಾಕ್ತೀವಿ ಅಂತ ಸಿಎಂ ಹೇಳಿದ್ದಾರೆ. ಹಾಗಿರುವಾಗ ಕೆಲಸ ಬಿಟ್ಟು ನಾವು ಯಾಕೆ ಕಾರ್ಯಕ್ರಮಕ್ಕೆ ಬರಬೇಕು? ಇಲ್ಲವಾದರೆ ದುಡ್ಡು ಬರಲ್ಲ ಅಂತ ಹೆದರಿಸಿ ಕರೆತಂದಿದ್ದಾರೆ ಅಂತ ಗಂಡಸರು ಆಕ್ರೋಶಗೊಂಡಿದ್ದಾರೆ!
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ