ಡಿಕೆ ಶಿವಕುಮಾರ್ ಲಕ್ಕಿ ಬೈಕ್‌ಗೆ ಹೊಸ ರೂಪ, ಆ ದಿನಗಳನ್ನು ಮೆಲುಕು ಹಾಕಿದ ಡಿಸಿಎಂ
1970, 80ರ ದಶಕದಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಓಡಿಸುತ್ತಿದ್ದ ಯೆಜ್‌ಡಿ ರೋಡ್‌ಕಿಂಗ್ ಬೈಕ್‌ಗೆ ಹೊಸ ರೂಪ ಬಂದಿದೆ. 30 ವರ್ಷಗಳಿಂದ ದೂಳು ಹಿಡಿದು ಮೂಲೆ ಸೇರಿದ್ದ ಬೈಕ್ ಯುವ ಮೆಕ್ಯಾನಿಕ್ ಸುಪ್ರೀತ್ ಮರು ಜೀವ ನೀಡಿದ್ದಾರೆ.
ಯೆಜ್‌ಡಿ ರೋಡ್‌ಕಿಂಗ್ ಬೈಕ್ 1970, 80ರ ದಶಕದಲ್ಲಿ ಯಂಗ್‌ಸ್ಟರ್‌ಗಳಲ್ಲಿ ಕ್ರೇಜ್ ಸೃಷ್ಟಿಸಿದ್ದ ಗಾಡಿ. ರಸ್ತೆಯಲ್ಲಿ ಹೋಗುತ್ತಿದ್ದರೇ ತಿರುಗಿ ನೋಡುವವರು ಅದೆಷ್ಟೊ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು 30-35 ವರ್ಷಗಳ ಹಿಂದೆ ಬೆಂಗಳೂರಿನ ಪ್ರತಿಷ್ಠಿತ ಹೆಚ್ಆರ್ಸಿ ಕಾಲೇಜಿನಲ್ಲಿ ಓದುವಾಗ ಅವರಿಗೆ ಬೈಕ್ ಕ್ರೇಜ್ ಇತ್ತು. ಆಗ ಅವರು ಈ ಯೆಜ್‌ಡಿ ಬೈಕ್ ಓಡಿಸುತ್ತಿದ್ದರು. ಯೂತ್ ಕಾಂಗ್ರೆಸ್‌ನಲ್ಲಿದ್ದಾಗಲೂ ಈ ಬೈಕ್‌ನಲ್ಲಿ ಓಡಾಡುತ್ತಿದ್ದರು. ಇದು ಡಿಕೆ ಶಿವಕುಮಾರ್ ಅವರ ಲಕ್ಕಿ ಬೈಕ್. ಹೀಗಾಗಿ ಈ ಬೈಕ್ನ್ನು ಮಾರಾಟ ಮಾಡದೆ ಹಾಗೇ ಇಟ್ಟುಕೊಂಡಿದ್ದರು.
30 ವರ್ಷದಿಂದ ಧೂಳು ಹಿಡಿದಿದ್ದ ಈ ಬೈಕನ್ನು ಬೆಂಗಳೂರಿನ ಹಳೆ ಬೈಕ್‌ಗಳ ಪ್ರೇಮಿ ಸುಪ್ರೀತ್ ಎಂಬವರು ರಿಪೇರಿ ಮಾಡಿ ಅದನ್ನು ಡಿಕೆ ಶಿವಕುಮಾರ್ ಅವರಿಗೆ ಒಪ್ಪಿಸಿದ್ದಾರೆ. 70-80 ದಶಕದ ಬೈಕ್ ಆದ ಕಾರಣ ಅದರ ಬಿಡಿ ಭಾಗಗಳು ಸಿಗುವುದು ಕಷ್ಟವಾಯ್ತು. ಹೀಗಾಗಿ ಕೆಲ ಭಾಗಗಳನ್ನು ಬೇರೆ ಬೇರೆ ರಾಜ್ಯ ಮತ್ತು ಇಂಜಿನ್ ಪಾರ್ಟ್ಸ್ಗಳನ್ನು ವಿದೇಶದಿಂದ ತರಿಸಿಕೊಂಡೆ. ಸತತ 10 ತಿಂಗಳ ಪರಿಶ್ರಮದಿಂದ 2 ಲಕ್ಷ ರೂ. ಖರ್ಚು ಮಾಡಿ ಡಿಕೆ ಶಿವಕುಮಾರ್ ಅವರ ಪ್ರೀತಿಯ ಬೈಕ್‌ಗೆ ಮರುಜೀವ ನೀಡಿದ್ದೇನೆ ಎಂದು ಸುಪ್ರೀತ್ ಹೇಳಿದರು.
ತಮ್ಮ ಹಳೆ ಬೈಕ್‌ನ ಹೊಸ ರೂಪ ನೋಡಿ ಥ್ರಿಲ್ ಆದ ಡಿಕೆ ಶಿವಕುಮಾರ್ ಅವರು, ತಾವೇ ಸ್ಟಾರ್ಟ್ ಮಾಡಿ ಖುಷಿಪಟ್ಟರು. ನನ್ನ ಮೊದಲ ಬೈಕ್ ಇದು, ಸಾವಿರಾರು ನೆನಪುಗಳು ಬೆಸೆದುಕೊಂಡಿವೆ ಇದರೊಂದಿಗೆ ಅಂತ ಹೇಳಿದರು. ಬೈಕ್‌ಗೆ ಮರು ಜೀವ ನೀಡಿದ ಮೆಕ್ಯಾನಿಕ್ ಸುಪ್ರೀತ್ ಅವರ ಕೆಲಸವನ್ನು ಡಿಕೆ ಶಿವಕುಮಾರ್ ಶ್ಲಾಘಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:49 am, Mon, 2 September 24