ಶಿವಕುಮಾರ್ ವೇದಿಕೆ ದುರ್ಬಳಕೆ ಮಾಡಿಕೊಂಡು ಕೆಟ್ಟ ಭಾಷೆ ಬಳಸಿದ್ದಾರೆ: ಎಸ್ ವಿ ರಾಜೇಂದ್ರ ಸಿಂಗ್, ನಿರ್ದೇಶಕ
ಕನ್ನಡ ಚಿತ್ರರಂಗಕ್ಕೆ ಕರ್ನಾಟಕ ಸರ್ಕಾರ ನೀಡುತ್ತಿರುವ ಕೊಡುಗೆ ಏನು ಅಂತ ಬಾಬು ಪ್ರಶ್ನಿಸಿದರು. ಐದು ವರ್ಷಗಳಿಂದ ಪ್ರಶಸ್ತಿಗಳನ್ನು ನೀಡಿಲ್ಲ, ಬೇರೆ ರಾಜ್ಯಗಳಲ್ಲಿ ಆಯಾ ಭಾಷೆಗಳ ಚಿತ್ರಗಳಿಗೆ ₹ 5-7 ಕೋಟಿ ಸಬ್ಸಿಡಿ ಸಿಗುತ್ತಿದೆ, ಕರ್ನಾಟಕ ಸರ್ಕಾರವಾದರೋ ಓಬೀರಾಯನ ಕಾಲದ ನೀತಿಗೆ ಜೋತುಬಿದ್ದು ₹ 10 ಲಕ್ಷ ಸಬ್ಸಿಡಿ ನೀಡುತ್ತಿದೆ, ಸಿನಿಮಾ ಟಿಕೆಟ್ಗಳ ಬೆಲೆ ಗಗನ ತಲುಪಿದೆ, ಶಿವಕುಮಾರ್ ಇದರ ಬಗ್ಗೆ ಯೋಚಿಸಲಾರರೇ ಎಂದು ಕೇಳಿದರು.
ಬೆಂಗಳೂರು, ಮಾರ್ಚ್ 4: ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕನ್ನಡ ಚಿತ್ರರಂಗದವರ ವಿಷಯದಲ್ಲಿ ನಟ್ಟು, ಬೋಲ್ಟು ಅಂತ ಪದಬಳಕೆ ಮಾಡಿದ್ದು ಸ್ಯಾಂಡಲ್ವುಡ್ನ ಅನೇಕರ ಕಣ್ಣ ಕೆಂಪಾಗಿಸಿದೆ. ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿರುವ ಖ್ಯಾತ ನಿರ್ಮಾಪಕ-ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ (SV Rajendra Singh), ಶಿವಕುಮಾರ್ ಬಳಸಿದ ಭಾಷೆ ಸರಿಯಿಲ್ಲ ಮತ್ತು ಅದನ್ನೆಲ್ಲ ಮಾತಾಡಲು ಅದು ವೇದಿಕೆಯೂ ಅಲ್ಲ, ಒಂದು ಸಭೆಯನ್ನು ಕರೆದು ಅವರು ಹೇಳಬಹುದಿತ್ತು, ಕನ್ನಡ ಯಾರ ತಾತನ ಆಸ್ತಿಯೂ ಅಲ್ಲ, ಅದಕ್ಕೆ 2,000 ವರ್ಷಗಳ ಇತಿಹಾಸವಿದೆ, ಹಿಂದೆ ಗೋಕಾಕ್ ಚಳುವಳಿ ಸಮಯದಲ್ಲಿ ಕನ್ನಡ ಚಿತ್ರರಂಗ ಹೋರಾಟಕ್ಕಿಳಿದ ಬಳಿಕ ಸರ್ಕಾರವೇ ಉರುಳಿ ಬಿದ್ದಿತ್ತು, ಆಗ ಶಿವಕುಮಾರ್ ರಾಜಕೀಯದಲ್ಲಿದ್ದರೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾಪು ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ 9,99,999 ರೂ ದೇಣಿಗೆ ನೀಡಿದ ಡಿಕೆ ಶಿವಕುಮಾರ್
Published on: Mar 04, 2025 10:06 AM