ಇವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ

Updated on: Jun 09, 2025 | 3:22 PM

ವಿವಾಹಿತ ಪ್ರಿಯತಮೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಹರಿಣಿ (36) ಕೊಲೆಯಾದ ಮಹಿಳೆ, ಯಶಸ್ (25) ಕೊಲೆ ಆರೋಪಿ ಆಗಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಯಶಸ್ ಹಾಗೂ ಇಬ್ಬರು ಮಕ್ಕಳ ತಾಯಿ ಹರಿಣಿ ಇಬ್ಬರೂ ಕೆಂಗೇರಿ ನಿವಾಸಿಗಳು. ಆರೋಪಿ ಯಶಸ್‌ ನಿನ್ನ ಜೊತೆ ಮಾತಾಡಬೇಕು ಬಾ ಎಂದು ಓಯೋ ರೂಂಗೆ ಕರೆದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಬೆಂಗಳೂರು, (ಜೂನ್ 09):ವಿವಾಹಿತ ಪ್ರಿಯತಮೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಹರಿಣಿ (36) ಕೊಲೆಯಾದ ಮಹಿಳೆ, ಯಶಸ್ (25) ಕೊಲೆ ಆರೋಪಿ ಆಗಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಯಶಸ್ ಹಾಗೂ ಇಬ್ಬರು ಮಕ್ಕಳ ತಾಯಿ ಹರಿಣಿ ಇಬ್ಬರೂ ಕೆಂಗೇರಿ ನಿವಾಸಿಗಳು. ಆರೋಪಿ ಯಶಸ್‌ ನಿನ್ನ ಜೊತೆ ಮಾತಾಡಬೇಕು ಬಾ ಎಂದು ಓಯೋ ರೂಂಗೆ ಕರೆದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಮದುವೆಯಾಗಿದ್ದ ಹರಿಣಿಗೆ ಯಶಸ್‌ ಜಾತ್ರೆಯಲ್ಲಿ ಪರಿಚಿತನಾಗಿದ್ದ. ಹರಿಣಿ, ಯಶಸ್ ಸ್ನೇಹಿತನ ಸಂಬಂಧಿಯಾಗಿದ್ದರು. ಕೆಲ ತಿಂಗಳುಗಳಿಂದ ಹರಿಣಿ, ಯಶಸ್ ಮಧ್ಯೆ ಒಡನಾಟ ಹೆಚ್ಚಾಗಿತ್ತು. ಇದೇ ವಿಚಾರಕ್ಕೆ ಹರಿಣಿ ಹಾಗೂ ಯಶಸ್ ಮನೆಯಲ್ಲಿ ಗಲಾಟೆಯೂ ಆಗಿತ್ತು. ಇದರಿಂದ ಹರಿಣಿಯು ಯಶಸ್‌ನಿಂದ ಅಂತರ ಕಾಯ್ದುಕೊಂಡಿದ್ದಳು. ಇನ್ನು ಆರೋಪಿ ಯಶಸ್‌, ಪೂರ್ಣಪ್ರಜ್ಞ ಲೇಔಟ್‌ನ ಓಯೋ ರೂಂಗೆ ಹರಿಣಿಯನ್ನು ಕರೆದೊಯ್ದು ಹತ್ಯೆ ಮಾಡಿದ್ಯಾಕೆ ಎನ್ನುವುದನ್ನು ಡಿಸಿಪಿ ಎಳೆ ಎಳೆಯಾಗಿಬಿಚ್ಚಿಟ್ಟಿದ್ದಾರೆ.

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More