[lazy-load-videos-and-sticky-control id=”jxLmih4AIrs”]ಬೆಂಗಳೂರು: ನಗರದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ ನಡೆದಿದೆ. ರಾಜ್ಯ ರಾಜಧಾನಿ ಮುಂಬೈ, ದೆಹಲಿಗಿಂತಲೂ ಕಡೆಯಾಗ್ತಿದ್ಯಾ ಎನ್ನುವಂತಾಗಿದೆ. ಸಿಲಿಕಾನ್ ಸಿಟಿಯಲ್ಲಿ ಊಹಿಸಲೂ ಅಸಾಧ್ಯವಾದ ಪರಿಸ್ಥಿತಿ ಎದುರಾಗಿದೆ.
ಬೆಂಗಳೂರಿನ ಬಸವೇಶ್ವರ ನಗರದ ರಸ್ತೆಯಲ್ಲಿ ಅನಾಥವಾಗಿ ಮೃತದೇಹ ಬಿದ್ದಿದೆ. ನಿನ್ನೆ ರಾತ್ರಿಯೇ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದೆ. ಇಷ್ಟು ಹೊತ್ತಾದ್ರೂ ಯಾವುದೇ ಆ್ಯಂಬುಲೆನ್ಸ್ ಬಂದಿಲ್ಲ. ದೇಹವನ್ನ ಬೇರೆಡೆ ಸಾಗಿಸೋ ಪ್ರಯತ್ನ ಕೂಡ ಆಗಿಲ್ಲ. ಯಾವ ಕಾರಣಕ್ಕೆ ಮೃತಪಟ್ಟಿದ್ದಾರೆ ಅನ್ನೋ ಮಾಹಿತಿಯೂ ಇಲ್ಲ. ಬಸವೇಶ್ವರ ನಗರದ ಅಂಬೇಡ್ಕರ್ ಮೈದಾನದ ಬಳಿ ಬಿದ್ದಿದ್ದ ಅನಾಥ ಶವ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ಟಿವಿ9 ವರದಿ ಬಳಿಕ ಸದ್ಯ ಈತ ಆ್ಯಂಬುಲೆನ್ಸ್ ಸ್ಥಳಕ್ಕೆ ಬಂದಿದ್ದು, ಪಿಪಿಇ ಕಿಟ್ ಧರಿಸಿದ್ದ ಸಿಬ್ಬಂದಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಸಾವಿಗೆ ಕಾರಣವೇನು ಅನ್ನೋದು ಇನ್ನಷ್ಟೇ ತಿಳಿದುಬರಬೇಕಿದೆ.
Published On - 11:44 am, Thu, 9 July 20