ಕಾವ್ಯಾ ಗೌಡ ಪತಿಯಿಂದ ಕೊಲೆ ಬೆದರಿಕೆ? ಎಲ್ಲವನ್ನೂ ವಿವರಿಸಿದ ಸಂಬಂಧಿ ಪ್ರೇಮಾ

Updated on: Jan 27, 2026 | 6:04 PM

‘ರಾಧಾ ರಮಣ’ ಸೀರಿಯಲ್ ನಟಿ ಕಾವ್ಯಾ ಗೌಡ ಅವರ ಕುಟುಂಬದ ಗಲಾಟೆ ಬೀದಿಗೆ ಬಂದಿದೆ. ಕಾವ್ಯಾ ಗೌಡ ಹಾಗೂ ಅವರ ಸಂಬಂಧಿಕರು ಪರಸ್ಪರ ಆರೋಪ ಮಾಡಿಕೊಂಡಿದ್ದಾರೆ. ಈ ಕಿರಿಕ್ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಾವ್ಯಾ ಮೇಲೆ ಸಂಬಂಧಿ ಪ್ರೇಮಾ ಅವರು ಒಂದಷ್ಟು ಆರೋಪಗಳನ್ನು ಮಾಡಿದ್ದಾರೆ.

‘ರಾಧಾ ರಮಣ’ ಸೀರಿಯಲ್ ನಟಿ ಕಾವ್ಯಾ ಗೌಡ (Kavya Gowda) ಅವರ ಕುಟುಂಬದ ಗಲಾಟೆ ಬೀದಿಗೆ ಬಂದಿದೆ. ಕಾವ್ಯಾ ಗೌಡ ಹಾಗೂ ಅವರ ಸಂಬಂಧಿಕರು ಪರಸ್ಪರ ಆರೋಪ ಮಾಡಿಕೊಂಡಿದ್ದಾರೆ. ಈ ಕಿರಿಕ್ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಾವ್ಯಾ ಮೇಲೆ ಸಂಬಂಧಿ ಪ್ರೇಮಾ ಅವರು ಒಂದಷ್ಟು ಆರೋಪಗಳನ್ನು ಮಾಡಿದ್ದಾರೆ. ‘ಕಾವ್ಯಾ ಪತಿ ಸೋಮಶೇಖರ್ ಅವರು ನನ್ನ ತಂಗಿ ಮೇಲೆ ಹಲ್ಲೆ ಮಾಡಿದ್ದಾರೆ. ಕೊಲೆ ಬೆದರಿಕೆ (Death Threat) ಮತ್ತು ರೇಪ್ ಬೆದರಿಕೆ ಹಾಕಿದ್ದಾರೆ. ಈಗ ಅವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾವ್ಯಾ ಗೌಡ ಅವರು ನಮ್ಮನ್ನು ಮನೆಯಿಂದ ಹೊರಗೆ ಹಾಕಬೇಕು ಎಂಬ ಕಾರಣಕ್ಕೆ ಈ ರೀತಿ ಕಿರಿಕ್ ಮಾಡುತ್ತಿದ್ದಾರೆ’ ಎಂದು ಪ್ರೇಮಾ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.