ಟಾರ್ಗೆಟ್ಟೇ ಬೇರೆ, ದರೋಡೆ ಮಾಡಿದ ಬಂಗಾರದ ಅಂಗಡಿಯೇ ಬೇರೆ!: ವಿಜಯಪುರ ರಾಬರಿ ಕೇಸ್ಗೆ ಹೊಸ ಟ್ವಿಸ್ಟ್
ಹಲಸಂಗಿ ಗ್ರಾಮದಲ್ಲಿನ ಭೂಮಿಕಾ ಜ್ಯುವೆಲರಿ ಶಾಪ್ ದರೋಡೆ ಪ್ರಕರಣ ಸಂಬಂಧ ಪೊಲೀಸ್ ತನಿಖೆವೇಳೆ ಅಚ್ಚರಿಯ ವಿಷಯವೊಂದು ಬಯಲಾಗಿದೆ. ಜಯಪುರದಿಂದ ಸೊಲ್ಲಾಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 52ರ ಮೂಲಕ ಹಲಸಂಗಿ ಗ್ರಾಮಕ್ಕೆ ಎಂಟ್ರಿ ಕೊಟ್ಟಿದ್ದ ಆರೋಪಿಗಳು, ಭೂಮಿಕಾ ಜ್ಯುವೆಲರಿ ಶಾಪ್ ದಾಟಿ ಬೇರೆ ಬಂಗಾರದ ಅಂಗಡಿಗಳತ್ತ ಮೊದಲು ಹೋಗಿದ್ದರು. ಬಳಿಕ ಹಿಂದಿರುಗಿ ಬಂದು ಗನ್ ತೋರಿಸಿ ಭೂಮಿಕಾ ಜ್ಯುವೆಲರಿ ಶಾಪ್ನಲ್ಲಿ ದರೋಡೆ ನಡೆಸಿದ್ದಾರೆ ಎನ್ನಲಾಗಿದೆ.
ವಿಜಯಪುರ, ಜನವರಿ 27: ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿನ ಭೂಮಿಕಾ ಜ್ಯುವೆಲರಿ ಶಾಪ್ ದರೋಡೆ ಪ್ರಕರಣ ಸಂಬಂಧ ಅಚ್ಚರಿಯ ಮಾಹಿತಿ ತನಿಖೆ ವೇಳೆ ಬಯಲಾಗಿದೆ. ದರೋಡೆಕೋರರು ರಾಬರಿ ಮಾಡಲು ಪ್ಲ್ಯಾನ್ ಮಾಡಿಕೊಂಡು ಬಂದಿದ್ದ ಬಂಗಾರದ ಅಂಗಡಿಯೇ ಬೇರೆಯಾಗಿತ್ತು. ಆದರೆ ಅಲ್ಲಿ ಹೆಚ್ಚು ಜನರಿದ್ದ ಕಾರಣ ಯೂಟರ್ನ್ ಮಾಡಿಕೊಂಡು ಬಂದು ಈ ಶಾಪ್ಗೆ ನುಗ್ಗಿದ್ದಾರೆ ಎಂಬುದು ಗೊತ್ತಾಗಿದೆ. ವಿಜಯಪುರದಿಂದ ಸೊಲ್ಲಾಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 52ರ ಮೂಲಕ ಹಲಸಂಗಿ ಗ್ರಾಮಕ್ಕೆ ಎಂಟ್ರಿ ಕೊಟ್ಟಿದ್ದ ಆರೋಪಿಗಳು, ಗ್ರಾಮ ಪಂಚಾಯಿತಿ ಬಳಿಯ ರಸ್ತೆಯಿಂದ ಗ್ರಾಮದ ಮಧ್ಯ ಭಾಗದಲ್ಲಿರುವ ಜ್ಯುವೆಲರಿ ಶಾಪ್ಗಳತ್ತ ಚಿತ್ತನೆಟ್ಟಿದ್ದರು. ಭೂಮಿಕಾ ಜ್ಯುವೆಲರಿ ಶಾಪ್ ದಾಟಿ ಬೇರೆ ಬಂಗಾರದ ಅಂಗಡಿಗಳತ್ತ ಮೊದಲು ಹೋಗಿದ್ದರು. ಬಳಿಕ ಹಿಂದಿರುಗಿ ಬಂದು ಗನ್ ತೋರಿಸಿ ಭೂಮಿಕಾ ಜ್ಯುವೆಲರಿ ಶಾಪ್ನಲ್ಲಿ ದರೋಡೆ ನಡೆಸಿದ್ದಾರೆ ಎನ್ನಲಾಗಿದೆ. ಬಂದ ಮಾರ್ಗದ ಮೂಲಕವೇ ಆರೋಪಿಗಳು ಎಸ್ಕೇಪ್ ಆಗಿದ್ದು, ದರೋಡೆಕೋರರ ಪತ್ತೆಗೆ ವಿಶೇಷ ತಂಡಗಳ ರಚನೆ ಮಾಡಿ ಎಸ್ಪಿ ಲಕ್ಷ್ಮಣ ನಿಂಬರಗಿ ಆದೇಶಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
