AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10ನೇ ದಿನ ಉತ್ಖನನ ವೇಳೆ ಕೋಟೆ ವೀರಭದ್ರೇಶ್ವರ ದೇಗುಲದ ಬಳಿ ಮತ್ತೊಂದು ಪ್ರಾಚ್ಯಾವಶೇಷ ಪತ್ತೆ!

10ನೇ ದಿನ ಉತ್ಖನನ ವೇಳೆ ಕೋಟೆ ವೀರಭದ್ರೇಶ್ವರ ದೇಗುಲದ ಬಳಿ ಮತ್ತೊಂದು ಪ್ರಾಚ್ಯಾವಶೇಷ ಪತ್ತೆ!

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Jan 27, 2026 | 6:04 PM

Share

ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಾತತ್ವ ಇಲಾಖೆ ವತಿಯಿಂದ ಕಳೆದ 10 ದಿನಗಳಿಂದ ಉತ್ಖನನ ಕಾರ್ಯ ನಡೆಸುತ್ತಿವೆ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ 10×10 ಅಳತೆಯ ನಾಲ್ಕು ಬಾಕ್ಸ್‌ಗಳಲ್ಲಿ ಉತ್ಖನನ ನಡೆಯುತ್ತಿದ್ದು, 10ನೇ ದಿನವಾದ ಇಂದು (ಜನವರಿ 27) ಉತ್ಖನನ ವೇಳೆ ಪ್ರಾಚ್ಯಾವಶೇಷ ಪತ್ತೆಯಾಗಿದೆ. ಹೌದು..ದೇವಕೋಷ್ಠದ ಮೇಲಿನ ಶಿಖರದ ಪ್ರಾಚ್ಯಾವಶೇಷ ಪತ್ತೆಯಾಗಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಗದಗ, (ಜನವರಿ 27): ಐತಿಹಾಸಿಕ ಲಕ್ಕುಂಡಿ (Lakkundi) ಗ್ರಾಮದಲ್ಲಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಾತತ್ವ ಇಲಾಖೆ ವತಿಯಿಂದ ಕಳೆದ 10 ದಿನಗಳಿಂದ ಉತ್ಖನನ ಕಾರ್ಯ ನಡೆಸುತ್ತಿವೆ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ 10×10 ಅಳತೆಯ ನಾಲ್ಕು ಬಾಕ್ಸ್‌ಗಳಲ್ಲಿ ಉತ್ಖನನ ನಡೆಯುತ್ತಿದ್ದು, 10 ಅಡಿ ಆಳ ತೆಗೆದಿರುವುದರಿಂದ A-1 ಬಾಕ್ಸ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಯಾವುದೇ ಕ್ಷಣದಲ್ಲಿ ಮಣ್ಣು ಕುಸಿಯುವ ಆತಂಕ ಸಿಬ್ಬಂದಿಗಳನ್ನು ಕಾಡುತ್ತಿದೆ. ಇನ್ನು B-1 ಬ್ಲಾಕ್‌ನಲ್ಲಿ ಬೃಹತ್ ಗಾತ್ರದ ಕಲ್ಲು ಪತ್ತೆಯಾಗಿದ್ದು, ಕಲ್ಲು ಬೀಳುವ ಭೀತಿ ಉಂಟಾಗಿದೆ. A-ಬ್ಲಾಕ್‌ನಲ್ಲಿ ಬಂಡೆಗಳ ಸಮೂಹ ಇರುವುದರಿಂದ ಉತ್ಖನನ ಕಾರ್ಯಕ್ಕೆ ತೀವ್ರ ತೊಂದರೆ ಎದುರಾಗಿದೆ. ಸುಮಾರು 35 ಕ್ಕೂ ಹೆಚ್ಚು ಸಿಬ್ಬಂದಿಗಳು ಈ ಅಪಾಯಕಾರಿ ಪರಿಸ್ಥಿತಿಗಳ ನಡುವೆ ಉತ್ಖನನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 10ನೇ ದಿನವಾದ ಇಂದು (ಜನವರಿ 27) ಉತ್ಖನನ ವೇಳೆ ಪ್ರಾಚ್ಯಾವಶೇಷ ಪತ್ತೆಯಾಗಿದೆ. ಹೌದು..ದೇವಕೋಷ್ಠದ ಮೇಲಿನ ಶಿಖರದ ಪ್ರಾಚ್ಯಾವಶೇಷ ಪತ್ತೆಯಾಗಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ