ಸುನೀಲ ಮನೆ ಕಟ್ಟಿಸುವ ಬಗ್ಗೆ ದೊಡ್ಡ ಕನಸು ಇಟ್ಟುಕೊಂಡಿದ್ದ: ಅನಂದ್, ಮೃತ ಸುನೀಲನ ಸಹೋದರ
ಮೃತ ಸುನೀಲನ ಕುಟುಂಬಸ್ಥರು ಸಾವಿನ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತಾಡಿರುವ ಆನಂದ್ ಸಹ ಅದನ್ನೇ ಹೇಳುತ್ತಾರೆ, ತನಿಖೆ ಆಗಲಿ, ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಅನ್ನುತ್ತಾರೆ. ಮನೆ ಕಟ್ಟುವ ವಿಷಯದಲ್ಲಿ ಸುನೀಲ ಮತ್ತು ಸಹೋದರನ ನಡುವೆ ಮನಸ್ತಾಪ ಉಂಟಾಗಿತ್ತಂತೆ. ಅದು ಇದೇ ಸಹೋದರನೇ ಅಥವಾ ಮತ್ತೊಬ್ಬನೆಯೇ ಅನ್ನೋದು ಇನ್ನೂ ಖಚಿತಪಟ್ಟಿಲ್ಲ.
ಗದಗ: ರಾಜ್ಯದಲ್ಲಿ ಅಸಹಜ ಸಾವುಗಳ ಪರ್ವ ಮುಂದುವರಿದಿದೆ. ಶಿರಹಟ್ಟಿಯ ಬಿಜೆಪಿ ಶಾಸಕ ಡಾ ಚಂದ್ರು ಲಮಾಣಿ ಅವರ ಡ್ರೈವರ್ ಸುನೀಲ್ ಚವ್ಹಾಣ ಹೆಸರಿನ ವ್ಯಕ್ತಿ ಶಾಸಕನ ಲಕ್ಷ್ಮೇಶ್ವರದಲ್ಲಿರುವ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಮೃತ ಸುನೀಲನ ಸಹೋದರ ಆನಂದ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ್ದು ಮನೆ ಕಟ್ಟಿಸುವ ವಿಷಯದಲ್ಲಿ ಡೊಡ್ಡ ಕನಸು ಕಂಡಿದ್ದ, ಕಳೆದ ರಾತ್ರಿ 7.30 ರವರೆಗೆ ತನ್ನೊಂದಿಗಿದ್ದ ಮತ್ತು 8.30 ಕ್ಕೆ ಫೋನ್ ಮಾಡಿ ಅವನೊಂದಿಗೆ ಮಾತಾಡಿದ್ದೆ ಎಂದು ಹೇಳುತ್ತಾರೆ. ಶಾಸಕ ಚಂದ್ರು ಲಮಾಣಿ ಅವರು ಸುನೀಲ ಮತ್ತು ಆನಂದ್ಗೆ ಅಜ್ಜನ ಕಡೆಯಿಂದ ಸಂಬಂಧಿಯಾಗಬೇಕು ಮತ್ತು ತಾವಿಬ್ಬರು ಅವರನ್ನು ಮಾಮಾ ಎಂದು ಕರೆಯುತ್ತಿದ್ದೆವು ಎಂದು ಹೇಳುವ ಆನಂದ್, ಚಂದ್ರು ಬಹಳ ಒಳ್ಳೆಯ ಮನುಷ್ಯ ಅವರ ಮೇಲೆ ಅನುಮಾನ ಪಡುವಂತೆಯೇ ಇಲ್ಲ ಎನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್: ಪ್ರಿಯಾಂಕ್ ಖರ್ಗೆ ಆಪ್ತ ಸೇರಿ ಐವರ ಬಂಧನ