ಚಿತ್ರಮಂದಿರಕ್ಕೆ ಜನ ಬರದೇ ಇರುವ ಬಗ್ಗೆ ನಟ ದೀಕ್ಷಿತ್ ಶೆಟ್ಟಿ ಮಾತು
‘ಬ್ಲಿಂಕ್’ ಅಂಥಹಾ ಒಳ್ಳೆಯ ಸಿನಿಮಾ ಕೊಟ್ಟರು ಹೆಚ್ಚಿನ ಜನ ಅದನ್ನು ಚಿತ್ರಮಂದಿರದಲ್ಲಿ ನೋಡಲಿಲ್ಲ. ಚಿತ್ರಮಂದಿರಗಳಿಗೆ ಜನ ಬಾರದೆ ಇರುವ ಬಗ್ಗೆ ‘ಬ್ಲಿಂಕ್’ ಸಿನಿಮಾದ ನಾಯಕ ದೀಕ್ಷಿತ್ ಶೆಟ್ಟಿ ಹೇಳಿದ್ದು ಹೀಗೆ.
ಕನ್ನಡ ಸಿನಿಮಾಗಳನ್ನು (Kannada Cinema) ನೋಡಲು ಜನ ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎಂಬ ಆರೋಪ ಇತ್ತೀಚೆಗೆ ಹೆಚ್ಚಾಗಿದೆ. ನೆರೆಯ ತೆಲಂಗಾಣದಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಕೆಲವು ದಿನಗಳ ಕಾಲ ಬಂದ್ ಮಾಡಲಾಗಿದೆ. ಇದೀಗ ಕರ್ನಾಟಕದಲ್ಲಿಯೂ ಸಹ ಚಿತ್ರಮಂದಿರಗಳನ್ನು (Theater) ಮುಚ್ಚುವ ಬಗ್ಗೆ ಚರ್ಚೆ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಬಿಡುಗಡೆ ಆದ ‘ಬ್ಲಿಂಕ್’ ಸಿನಿಮಾ ಬಗ್ಗೆ ಎಲ್ಲೆಡೆ ಧನಾತ್ಮಕ ವಿಮರ್ಶೆ ಕೇಳಿ ಬಂದಿತ್ತು. ಸಿನಿಮಾ ಕೆಲವು ಚಿತ್ರಮಂದಿರಗಳಲ್ಲಿ ಐವತ್ತು ದಿನ ಸಹ ಪೂರೈಸಿದೆ. ಆದರೆ ಹೆಚ್ಚಿನ ಜನ ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿಲ್ಲವೆಂದು ಕೊರಗು ಚಿತ್ರತಂಡಕ್ಕಿದೆ. ಸಿನಿಮಾದ 50 ದಿನದ ಸಂಭ್ರಮ ಆಚರಿಸಿದ ಚಿತ್ರತಂಡ. ಪ್ರೇಕ್ಷಕರ ಕೊರತೆ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿದೆ. ಚಿತ್ರಮಂದಿರಕ್ಕೆ ಜನ ಬರದೇ ಇರುವ ಬಗ್ಗೆ ನಟ ದೀಕ್ಷಿತ್ ಶೆಟ್ಟಿ ಮಾತನಾಡಿದ್ದು, ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ