ಕೊಲ್ಕತ್ತಾ ಹೈಕೋರ್ಟ್ ತೀರ್ಪಿ​ನಿಂದ ಇಂಡಿಯ ಬಣಕ್ಕೆ ಕಪಾಳಮೋಕ್ಷ; ಪಿಎಂ ಮೋದಿ ಪ್ರತಿಕ್ರಿಯೆ

PM Narendra Modi: ಇಂಡಿಯಾ ಬಣಕ್ಕೆ ಇಂದು ಸ್ವತಃ ಕೋಲ್ಕತ್ತಾ ಹೈಕೋರ್ಟ್ ದೊಡ್ಡ ಹೊಡೆತ ನೀಡಿದೆ. ಪಶ್ಚಿಮ ಬಂಗಾಳದಲ್ಲಿ 2010ರಿಂದ ನೀಡಲಾದ ಎಲ್ಲಾ ಒಬಿಸಿ ಪ್ರಮಾಣಪತ್ರಗಳನ್ನು ನ್ಯಾಯಾಲಯ ರದ್ದುಗೊಳಿಸಿದೆ. ವೋಟ್ ಬ್ಯಾಂಕ್‌ಗಾಗಿ ಅಮಾಯಕ ಮುಸ್ಲಿಮರನ್ನು ಒಬಿಸಿ ಮಾಡಲು ಪಶ್ಚಿಮ ಬಂಗಾಳ ಸರ್ಕಾರ ಪ್ರಮಾಣಪತ್ರಗಳನ್ನು ನೀಡಿತ್ತು. ಈ ರೀತಿಯ ಕೀಳು ರಾಜಕಾರಣಕ್ಕೆ ಕೋರ್ಟ್ ತೀರ್ಪು ಕಪಾಳಮೋಕ್ಷ ಮಾಡಿದಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೊಲ್ಕತ್ತಾ ಹೈಕೋರ್ಟ್ ತೀರ್ಪಿ​ನಿಂದ ಇಂಡಿಯ ಬಣಕ್ಕೆ ಕಪಾಳಮೋಕ್ಷ; ಪಿಎಂ ಮೋದಿ ಪ್ರತಿಕ್ರಿಯೆ
|

Updated on:May 22, 2024 | 9:18 PM

ಪಶ್ಚಿಮ ಬಂಗಾಳದಲ್ಲಿ 2010ರ ನಂತರ ನೀಡಲಾದ ಎಲ್ಲಾ ಒಬಿಸಿ ಪ್ರಮಾಣಪತ್ರಗಳನ್ನು ರದ್ದುಗೊಳಿಸಿದ ಕೊಲ್ಕತ್ತಾ ಹೈಕೋರ್ಟ್ (Culcutta High Court Verdict) ತೀರ್ಪಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಮಾತನಾಡಿದ್ದಾರೆ. ದೆಹಲಿಯ ದ್ವಾರಕಾದಲ್ಲಿ ಚುನಾವಣಾ ರ್ಯಾಲಿ ವೇಳೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, 2011ರಿಂದ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಸ್ಲಿಮರಿಗೆ ತಮ್ಮ ಮತಬ್ಯಾಂಕ್‌ಗಾಗಿ ಒಬಿಸಿ ಪ್ರಮಾಣಪತ್ರವನ್ನು ನೀಡಿದೆ. ಇಂಡಿಯ ಒಕ್ಕೂಟದ ಈ ಕೀಳುಮಟ್ಟದ ರಾಜಕಾರಣಕ್ಕೆ ಹೈಕೋರ್ಟ್ ಇಂದು ದೊಡ್ಡ ಹೊಡೆತವನ್ನೇ ನೀಡಿದೆ ಎಂದು ಹೇಳಿದ್ದಾರೆ.

“ಇಂದು ಕೊಲ್ಕತ್ತಾ ಹೈಕೋರ್ಟ್ 2010ರ ನಂತರ ನೀಡಲಾದ ಎಲ್ಲಾ OBC ಪ್ರಮಾಣಪತ್ರಗಳನ್ನು ರದ್ದುಗೊಳಿಸಲಾಗಿದೆ ಎಂದು ತೀರ್ಪು ನೀಡಿದೆ. ಪಶ್ಚಿಮ ಬಂಗಾಳ ಸರ್ಕಾರವು ಮುಸ್ಲಿಂ ಮತಬ್ಯಾಂಕ್‌ಗಾಗಿ ಮುಸ್ಲಿಮರಿಗೆ OBC ಪ್ರಮಾಣಪತ್ರಗಳನ್ನು ನೀಡಿತ್ತು. ಈ ವೋಟ್ ಬ್ಯಾಂಕ್ ರಾಜಕಾರಣ, ತುಷ್ಟೀಕರಣದ ರಾಜಕಾರಣ ಎಲ್ಲ ಮಿತಿಗಳನ್ನು ದಾಟುತ್ತಿದೆ ಎಂದು ಮೋದಿ ಟೀಕಿಸಿದ್ದಾರೆ.

ಇಂದು ನ್ಯಾಯಾಲಯವು ಮಮತಾ ಬ್ಯಾನರ್ಜಿ ಅವರ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ. ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಅವರು ಹೇಳುತ್ತಾರೆ. ಪ್ರತಿಪಕ್ಷಗಳು ಮತಕ್ಕಾಗಿ ಸರ್ಕಾರಿ ಭೂಮಿಯನ್ನು ವಕ್ಫ್ ಮಂಡಳಿಗೆ ಹಸ್ತಾಂತರಿಸುತ್ತಿವೆ. ಅದಕ್ಕೆ ಪ್ರತಿಯಾಗಿ ಮತ ಕೇಳುತ್ತಿದ್ದಾರೆ ಎಂದು ಮೋದಿ ಆರೋಪಿಸಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:17 pm, Wed, 22 May 24

Follow us