ಡೀಪ್-ವೀರ್​ಗೂ ಐಪಿಎಲ್ ಟೀಮಿನ ಮೇಲೆ ಕಣ್ಣು, ಮ್ಯಾಂಚೆಸ್ಟರ್ ಯುನೈಟೆಡ್ ಜೊತೆ ಬಿಡ್ಡಿಂಗ್​​​​ನಲ್ಲಿ ಭಾಗಿ!

ಐಪಿಎಲ್ ಮತ್ತು ಬಾಲಿವುಡ್ ನಡುವೆ ಅವಿನಾಭಾವ ಸಂಬಂದವಿದೆ. ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾ ಕೊಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿ ಒಡೆಯರಾಗಿದ್ದಾರೆ. ಪ್ರೀಟಿ ಜಿಂಟಾ ಪಂಜಾಬ್ ಕಿಂಗ್ಸ್ ಟೀಮಿನ ಮಾಲೀಕರಲ್ಲಿ ಒಬ್ಬರಾಗಿದ್ದಾರೆ.

ಇಂಡಿಯನ್ ಪ್ರಿಮೀಯರ್ ಲೀಗ್ (ಐಪಿಎಲ್) ಮುಂದಿನ ಸೀಸನಿಂದ 10 ಟೀಮುಗಳ ಟೂರ್ನಮೆಂಟ್ ಆಗಲಿರುವುದು ನಿಮಗೆ ಗೊತ್ತಿದೆ. ಮತ್ತೆರಡು ಟೀಮುಗಳನ್ನು ಐಪಿಎಲ್ ಗೆ ಸೇರಿಸಿಕೊಳ್ಳಲು ಆಗಸ್ಟ್ 31 ರಂದೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟೆಂಡರ್ ಗಳನ್ನು ಬಿಡುಗಡೆ ಮಾಡಿರುವ ಬಗ್ಗೆ ಮಾಧ್ಯಮ ಹೇಳಿಕೆ ಹೊರಡಿಸಿತ್ತು ಮತ್ತು ಸೋಮವಾರದಂದು ದುಬೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಬಾಲಿವುಡ್ ನ ಸುಂದರ ಜೋಡಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಟುಕೋಣೆ ಸಹ ಒಂದು ಟೀಮನ್ನು ಕೊಳ್ಳಲು ಬಿಡ್ ಮಾಡಲಿದ್ದಾರೆ. ಇಂಗ್ಲಿಷ್ ಪ್ರಿಮೀಯರ್ ಲೀಗ್ ಖ್ಯಾತ ಸಾಕರ್ ತಂಡ ಮ್ಯಾಂಚೆಸ್ಟರ್ ಯುನೈಟೆಡ್ ಸಹಭಾಗಿತ್ವದಲ್ಲಿ ತಾರಾ ದಂಪತಿ ಎರಡರಲ್ಲಿ ಒಂದು ಟೀಮನ್ನು ಖರೀದಿಸಲು ನಿಶ್ಚಯಿಸಿಕೊಂಡಿದ್ದಾರೆ. ಇದೇ ಫುಟ್ಬಾಲ್ ಕ್ಲಬ್ ಗೆ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಆಡುತ್ತಾರೆ.

ಐಪಿಎಲ್ ಮತ್ತು ಬಾಲಿವುಡ್ ನಡುವೆ ಅವಿನಾಭಾವ ಸಂಬಂದವಿದೆ. ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾ ಕೊಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿ ಒಡೆಯರಾಗಿದ್ದಾರೆ. ಪ್ರೀಟಿ ಜಿಂಟಾ ಪಂಜಾಬ್ ಕಿಂಗ್ಸ್ ಟೀಮಿನ ಮಾಲೀಕರಲ್ಲಿ ಒಬ್ಬರಾಗಿದ್ದಾರೆ. ಹಾಗೆಯೇ, ಕನ್ನಡತಿ ಶಿಲ್ಪಾ ಶೆಟ್ಟಿ ತಮ್ಮ ಪತಿ ರಾಜ್ ಕುಂದ್ರಾ ಜೊತೆ ರಾಜಸ್ತಾನ ರಾಯಲ್ಸ್ ತಂಡದ ಮಾಲೀಕತ್ವದಲ್ಲಿ ಭಾಗಿದಾರರಾಗಿದ್ದರು. ಈಗ ಅದನ್ನವರು ಬಿಟ್ಟುಕೊಟ್ಟಿದ್ದಾರೆ.

ವಿಶ್ವ ವಿಖ್ಯಾತ ಬ್ಯಾಡ್ಮಿಂಟನ್ ಆಟಗಾರರಾಗಿದ್ದ ಪ್ರಕಾಶ ಪಡುಕೋಣೆಯವರ ಮಗಳು ದೀಪಿಕಾಗೂ ಕ್ರೀಡೆಯಲ್ಲಿ ಅಪಾರ ಆಸಕ್ತಿ. ಕಪಿಲ್ ದೇವ್ ಅವರ ಬಯೋಪಿಕ್ ನಲ್ಲಿ ಲೆಜೆಂಡರಿ ಆಟಗಾರನ ಪಾತ್ರ ನಿರ್ವಹಿಸಿರುವ ರಣವೀರ್ ಎನ್ ಬಿ ಎ (ನ್ಯಾಶನಲ್ ಬ್ಯಾಸ್ಕೆಟ್ ಬಾಲ್ ಅಸೋಸಿಯೇಶನ್) ಮತ್ತು ಈಪಿಎಲ್ ಗೆ ಬ್ರ್ಯಾಂಡ್ ಅಂಬ್ಯಾಸಿಡರ್ ಆಗಿದ್ದಾರೆ.

ದೀಪಿಕಾ-ರಣವೀರ್ ಅಲ್ಲದೆ ಅದಾನಿ ಗ್ರೂಪ್, ಆರ್ಪಿಜಿ ಸಂಜೀವ ಗೊಯೆಂಕಾ ಗ್ರೂಪ್, ಟೊರೆಂಟ್ ಫಾರ್ಮಾಸ್ಯುಟಿಕಲ್ ಕಂಪನಿ, ಅರಬಿಂದೋ ಫಾರ್ಮಾ ಮೊದಲಾದವರು ಸಹ ಐಪಿಎಲ್ ಟೀಮು ಖರೀದಿಸುವ ರೇಸ್​ನಲ್ಲಿದ್ದಾರೆ.

ಇದನ್ನೂ ಓದಿ:  IPL Bidding: 2 ಹೊಸ ಐಪಿಎಲ್ ತಂಡಗಳ ಖರೀದಿಗೆ 9 ಕಂಪನಿಗಳ ಪೈಪೋಟಿ! ಅದಾನಿ ಕೈಸೇರುತ್ತಾ ಹೊಸ ತಂಡ?

Click on your DTH Provider to Add TV9 Kannada