ದೀಪಾವಳಿ ಹಬ್ಬದ ರಜೆ:ಊರಿನತ್ತ ಮುಖ ಮಾಡಿದ ಜನ, ಮೆಜೆಸ್ಟಿಕ್‌ನಲ್ಲಿ ಜನಸಾಗರ

Updated on: Oct 17, 2025 | 10:09 PM

ದೀಪಾವಳಿ ಹಬ್ಬ ಇರುವುದು ಸೋಮವಾರ. ಆದ್ರೆ, ಶನಿವಾರ ಹಾಗೂ ಭಾನುವಾರ ವೀಕೆಂಡ್ ರಜೆ ಬಂದಿರುವುದರಿಂದ ಜನರು ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಸಾಲು ಸಾಲು ರಜೆ ಹಿನ್ನೆಲ್ಲೆಯಲ್ಲಿ ಬೆಂಗಳೂರಿನ ಉದ್ಯೋಗ ಹಾಗೂ ವಿದ್ಯಾಭ್ಯಾಸ ಮಾಡುತ್ತಿರುವವರು ದೀಪಾವಳಿ ಹಬ್ಬ ಆಚರಿಸಲು ಊರಿಗೆ ತೆರಳುತ್ತಿದ್ದಾರೆ. ಇದರಿಂದ ಮೆಜೆಸ್ಟಿಕ್ ಸುತ್ತಮುತ್ತ ಫುಲ್ ಟ್ರಾಫಿಕ್ ಜಾಮ್ ಆಗಿದೆ. ಇನ್ನು ಊರಿಗೆ ತೆರಳು ಬಸ್ ಕೊರತೆ ಎದುರಾಗಿದ್ದರಿಂದ ಜನರು ಪರದಾಡುತ್ತಿದ್ದಾರೆ. ಸಿಕ್ಕ ಸಿಕ್ಕ ಬಸ್ ಹತ್ತಿಕೊಂಡು ಹೋಗುತ್ತಿದ್ದು,ಕೆಎಸ್​​ಆರ್ ಟಿ ಬಸ್ ಟರ್ಮಿನಲ್ ಜನರಿಂದ ತುಂಬಿ ತುಳುಕುತ್ತಿದೆ.

ಬೆಂಗಳೂರು, (ಅಕ್ಟೋಬರ್ 17): ದೀಪಾವಳಿ ಹಬ್ಬ ಇರುವುದು ಸೋಮವಾರ. ಆದ್ರೆ, ಶನಿವಾರ ಹಾಗೂ ಭಾನುವಾರ ವೀಕೆಂಡ್ ರಜೆ ಬಂದಿರುವುದರಿಂದ ಜನರು ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಸಾಲು ಸಾಲು ರಜೆ ಹಿನ್ನೆಲ್ಲೆಯಲ್ಲಿ ಬೆಂಗಳೂರಿನ ಉದ್ಯೋಗ ಹಾಗೂ ವಿದ್ಯಾಭ್ಯಾಸ ಮಾಡುತ್ತಿರುವವರು ದೀಪಾವಳಿ ಹಬ್ಬ ಆಚರಿಸಲು ಊರಿಗೆ ತೆರಳುತ್ತಿದ್ದಾರೆ. ಇದರಿಂದ ಮೆಜೆಸ್ಟಿಕ್ ಸುತ್ತಮುತ್ತ ಫುಲ್ ಟ್ರಾಫಿಕ್ ಜಾಮ್ ಆಗಿದೆ. ಇನ್ನು ಊರಿಗೆ ತೆರಳು ಬಸ್ ಕೊರತೆ ಎದುರಾಗಿದ್ದರಿಂದ ಜನರು ಪರದಾಡುತ್ತಿದ್ದಾರೆ. ಸಿಕ್ಕ ಸಿಕ್ಕ ಬಸ್ ಹತ್ತಿಕೊಂಡು ಹೋಗುತ್ತಿದ್ದು,ಕೆಎಸ್​​ಆರ್ ಟಿ ಬಸ್ ಟರ್ಮಿನಲ್ ಜನರಿಂದ ತುಂಬಿ ತುಳುಕುತ್ತಿದೆ.