‘ಗಂಗಿ ಗಂಗಿ..’ ಹಾಡು ಸೂಪರ್ ಹಿಟ್: ಬಾಳು ಬೆಳಗುಂದಿ ಫುಲ್ ಖುಷ್
‘ಬ್ರ್ಯಾಟ್’ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ. ಇಂದು (ಅಕ್ಟೋಬರ್ 17) ಈ ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮ ನಡೆಯಿತು. ಈ ವೇಳೆ ಗಾಯಕ ಬಾಳು ಬೆಳಗುಂದಿ ಮಾತನಾಡಿದರು. ಅವರು ಹಾಡಿದ ಗಂಗಿ ಗಂಗಿ ಹಾಡು ಜನಪ್ರಿಯತೆ ಪಡೆದಿದೆ. ಅದರಿಂದ ಅವರಿಗೆ ಬಹಳ ಖುಷಿ ಆಗಿದೆ.
ಡಾರ್ಲಿಂಗ್ ಕೃಷ್ಣ ನಟನೆಯ ‘ಬ್ರ್ಯಾಟ್’ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ. ಇಂದು (ಅ.17) ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ಗಾಯಕ ಬಾಳು ಬೆಳಗುಂದಿ (Balu Belagundi) ಅವರು ಮಾತನಾಡಿದರು. ಅವರು ಹಾಡಿರುವ ‘ಗಂಗಿ ಗಂಗಿ..’ ಹಾಡು ಜನಪ್ರಿಯತೆ ಗಳಿಸಿದೆ. ಅದರಿಂದ ಅವರಿಗೆ ತುಂಬಾ ಖುಷಿ ಆಗಿದೆ. ಆ ಕುರಿತು ಅವರು ಸಂತಸ ಹಂಚಿಕೊಂಡರು. ಶಶಾಂಕ್ ನಿರ್ದೇಶನ ಮಾಡಿರುವ ‘ಬ್ರ್ಯಾಡ್’ ಸಿನಿಮಾ (Brat Movie) ಅಕ್ಟೋಬರ್ 31ರಂದು ಬಿಡುಗಡೆ ಆಗಲಿದೆ. ‘ನನಗೆ ಮೊದಲ ಬಾರಿ ಸಾಹಿತ್ಯ ಬರೆದು ಹಾಡಲು ಅವಕಾಶ ಸಿಕ್ಕಿತು. ದೊಡ್ಡ ಪರದೆ ಮೇಲೆ ನನ್ನ ಹಾಡನ್ನು ನೋಡಲು ನಾನು ಕಾಯುತ್ತಿದ್ದೇನೆ’ ಎಂದು ಬಾಳು ಬೆಳಗುಂದಿ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

